Asianet Suvarna News Asianet Suvarna News

ಲೋಕಸಭೆಗೆ ಈ ಬಾರಿ 27 ಮುಸ್ಲಿಂ ಸದಸ್ಯರ ಆಯ್ಕೆ, 2014ಕ್ಕಿಂತ 4 ಅಧಿಕ

ಲೋಕಸಭೆಗೆ ಈ ಬಾರಿ 27 ಮುಸ್ಲಿಂ ಸದಸ್ಯರ ಆಯ್ಕೆ, 2014ಕ್ಕಿಂತ 4 ಅಧಿಕ| 1980ರಲ್ಲಿ ಅತಿ ಹೆಚ್ಚು ಮುಸ್ಲಿಂ ಸದಸ್ಯರು ಸಂಸತ್ತಿಗೆ

Loksabha to have more number of Muslim MPs as 27 emerge victorious
Author
Bangalore, First Published May 25, 2019, 9:42 AM IST

ನವದೆಹಲಿ[ಮೇ.25]: ಲೋಕಸಭೆಗೆ ಈ ಬಾರಿ 27 ಮುಸ್ಲಿಂ ಸದಸ್ಯರು ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಲೋಕಸಭೆಯಲ್ಲಿ 23 ಮುಸ್ಲಿಂ ಸದಸ್ಯರಿದ್ದರು. ಅಂದರೆ ಕಳೆದ ಬಾರಿಗಿಂತ 4 ಸದಸ್ಯರು ಹೆಚ್ಚಾಗಿದ್ದಾರೆ.

ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಲಾ 6, ಕೇರಳ, ಜಮ್ಮು- ಕಾಶ್ಮೀರದಿಂದ ತಲಾ 3, ಆಸ್ಸಾಂ, ಬಿಹಾರದಿಂದ ತಲಾ 2, ಪಂಜಾಬ್‌, ಮಹಾರಾಷ್ಟ್ರ, ತಮಿಳುನಾಡು, ಲಕ್ಷದ್ವೀಪ ಮತ್ತು ತೆಲಂಗಾಣದಿಂದ ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಪಕ್ಷವಾರು ಟಿಎಂಸಿಯಿಂದ 5, ಕಾಂಗ್ರೆಸ್‌ನ 4, ಎಸ್ಪಿ, ಬಿಎಸ್ಪಿ, ನ್ಯಾಷನಲ್‌ ಕಾಂಗ್ರೆಸ್‌ ಮತ್ತು ಐಯುಎಂಎಲ್‌ ತಲಾ 3, ಎಐಎಂಐಎಂನ 2 ಸಂಸದರಿದ್ದಾರೆ. ಎಲ್‌ಜೆಪಿ, ಎನ್‌ಸಿಪಿ, ಸಿಪಿಐ(ಎಂ) ಮತ್ತು ಎಐಯುಡಿಎಫ್‌ನ ತಲಾ ಒಬ್ಬ ಮುಸ್ಲಿಂ ಸಂಸದರಿದ್ದಾರೆ.

1980ರಲ್ಲಿ ಅತಿ ಹೆಚ್ಚು ಅಂದರೆ 49 ಮುಸ್ಲಿಂ ಸಂಸದರು, 1952ರಲ್ಲಿ ಅತಿ ಕಡಿಮೆ ಎಂದರೆ 11 ಮುಸ್ಲಿಂ ಸಂಸದರಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಜಮ್ಮು ಮತ್ತು ಕಾಶ್ಮೀರದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 2 ಮತ್ತು ಲಕ್ಷದ್ವೀಪದಲ್ಲಿ ಒಬ್ಬರು ಹೀಗೆ ಆರು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದು, ಆ ಪೈಕಿ ಯಾರೊಬ್ಬರೂ ಗೆದ್ದಿಲ್ಲ.

Follow Us:
Download App:
  • android
  • ios