ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಶಾಸಕರಾಗಿ ಆಯ್ಕೆಯಾದ ಮೂವರು ಸಂಸದರ ರಾಜೀನಾಮೆಯನ್ನು ಲೋಕಸಭಾ ಸ್ಪೀಕರ್ ಅಂಗೀಕಾರ ಮಾಡಿದ್ದಾರೆ. 

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಶಾಸಕರಾಗಿ ಆಯ್ಕೆಯಾದ ಮೂವರು ಸಂಸದರ ರಾಜೀನಾಮೆಯನ್ನು ಲೋಕಸಭಾ ಸ್ಪೀಕರ್ ಅಂಗೀಕಾರ ಮಾಡಿದ್ದಾರೆ. 

ಬಳ್ಳಾರಿ ಲೋಕಸಭಾ ಸದಸ್ಯ ಶ್ರೀರಾಮುಲು, ಶಿವಮೊಗ್ಗ ಸಂಸದರಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಮಂಡ್ಯ ಸಂಸದ ಪುಟ್ಟರಾಜು‌ ರಾಜೀನಾಮೆ ಅಂಗೀಕಾರ ಮಾಡಲಾಗಿದೆ.

ಶಾಸಕರಾಗಿ ಆಯ್ಕೆ ಹಿನ್ನೆಲೆಯಲ್ಲಿ ಈ ಮೂವರು ಕೂಡ ಸಂಸದ ಸ್ಥಾನಕ್ಕೆ ಕಳೆದ ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಇದೀಗ ಈ ಮೂವರು ನಾಯಕರ ರಾಜೀನಾಮೆಯನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾ ಜನ್ ಅಂಗೀಕಾರ ಮಾಡಿದ್ದಾರೆ.