ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ರಾಹುಕಾಲದಲ್ಲಿ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿರುವುದು ರಾಜಕೀಯ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜಕಾರಣಿಗಳು ಇದಕ್ಕೆ ಹೆಚ್ಚಿನ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸಂಜೆ 4.30ರಿಂದ 6 ಗಂಟೆಯವರೆಗೆ ರಾಹುಕಾಲವಿತ್ತು. ಈ ಅವಧಿಯಲ್ಲೇ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿತು. ಯಾವುದೇ ಕೆಲಸವನ್ನು ರಾಹುಕಾಲದಲ್ಲಿ ಆರಂಭಿಸಬಾರದು ಎಂದು ಶಾಸ್ತ್ರಗಳು ಹೇಳುವುದರಿಂದ ರಾಹುಕಾಲವನ್ನು ತಪ್ಪಿಸಿ ಬೇರೆ ಅವಧಿಯಲ್ಲಿ ಪತ್ರಿಕಾಗೋಷ್ಠಿ ನಡೆಸಬಹುದಿತ್ತು ಎಂಬ ಮಾತುಗಳು ಕೇಳಿಬಂದವು.

ಈ ಪತ್ರಿಕಾಗೋಷ್ಠಿಗೂ ಮುಂಚೆಯೇ ದಕ್ಷಿಣದ ಕೆಲ ರಾಜಕೀಯ ಪಕ್ಷಗಳು ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯ ಸಮಯವನ್ನು ಬದಲಿಸಬೇಕೆಂದು ಆಗ್ರಹಿಸಿದ್ದವು. ಅದಕ್ಕೆ ಚುನಾವಣಾ ಆಯೋಗ ಸೊಪ್ಪು ಹಾಕಿಲ್ಲ.