ನವದೆಹಲಿ (ಜ. 03): 2019 ರ ಬೇಸಿಗೆಯಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದ್ದು, ಜನವರಿ 21 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾ ಗುತ್ತದೆ ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ಮತದಾರರು ತಮ್ಮ ಹೆಸರು ಸಂಬಂಧಿತ ಲೋಕಸಭಾ ಕ್ಷೇತ್ರದಲ್ಲಿ ಇದೆಯೇ ಎಂಬುದನ್ನು ಸಮೀಪದ ಚುನಾವಣಾ ಕಚೇರಿಗೆ ಹೋಗಿ ದೃಢಪಡಿಸಿಕೊಳ್ಳಬೇಕು ಎಂದೂ ಅದು ಕೇಳಿಕೊಂಡಿದೆ. ಇದೇ ವೇಳೆ ಎಲ್ಲ ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೂ ಸೂಚನೆ ನೀಡಿರುವ ಆಯೋಗ, ಮತದಾರರ ಹೆಸರು ವಿನಾಕಾರಣ ಬಿಟ್ಟು ಹೋಗಕೂಡದು ಎಂದೂ ನಿರ್ದೇಶಿಸಿದೆ.