ಬೆಂಗಳೂರು [ಸೆ.17]:  ರಾಜ್ಯ ಬಿಜೆಪಿ ಕಾರ್ಯಾಲಯದ ನೂತನ ಕಾರ್ಯದರ್ಶಿಯಾಗಿ ಲೋಕೇಶ್‌ ಅಂಬೆಕಲ್ಲು ಅವರನ್ನು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇಮಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಅಧ್ಯಕ್ಷರಾದ ಅವಧಿಯಲ್ಲಿ ರಾಜ್ಯ ಕಚೇರಿ ಕಾರ್ಯದರ್ಶಿಯಾಗಿ ಗಣೇಶ್‌ ಯಾಜಿ ಅವರನ್ನು ನೇಮಿಸಲಾಗಿತ್ತು. 

ಇದೀಗ ಕಟೀಲ್‌ ಅವರು ಅಧ್ಯಕ್ಷರಾದ ಬಳಿಕ ಅವರನ್ನು ಬದಲಾವಣೆ ಮಾಡಿ ಇದುವರೆಗೆ ಕಚೇರಿಯ ಸಹ ಕಾರ್ಯದರ್ಶಿ ಆಗಿದ್ದ ಲೋಕೇಶ್‌ ಅವರಿಗೆ ಮುಂಬಡ್ತಿ ಕೊಟ್ಟು ಕಾರ್ಯಾಲಯ ನಿರ್ವಹಣೆ ಹೊಣೆಗಾರಿಕೆಯನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ