ಶತ್ರು ಆಸ್ತಿ ಮಸೂದೆಗೆ (ಎನಿಮಿ ಪ್ರಾಪರ್ಟಿ ಬಿಲ್) ಸೂಚಿಸಿರುವ ತಿದ್ದುಪಡಿಗಳಿಗೆ ಲೋಕಸಭೆಯಲ್ಲಿಂದು ಧ್ವನಿ ಮತದ ಮೂಲಕ ಅನುಮೋದನೆ ನೀಡಲಾಯಿತು. ಇದರನ್ವಯ ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನ/ ಚೀನಾಗೆ ವಲಸೆ ಹೋದವರ ಭಾರತದ ಆಸ್ತಿ ಮೇಲೆ ಅವರ ಉತ್ತರಾಧಿಕಾರಿಗಳಿಗೆ ಯಾವುದೇ ಹಕ್ಕಿರುವುದಿಲ್ಲ.
ನವದೆಹಲಿ (ಮಾ.14): ಶತ್ರು ಆಸ್ತಿ ಮಸೂದೆಗೆ (ಎನಿಮಿ ಪ್ರಾಪರ್ಟಿ ಬಿಲ್) ಸೂಚಿಸಿರುವ ತಿದ್ದುಪಡಿಗಳಿಗೆ ಲೋಕಸಭೆಯಲ್ಲಿಂದು ಧ್ವನಿ ಮತದ ಮೂಲಕ ಅನುಮೋದನೆ ನೀಡಲಾಯಿತು. ಇದರನ್ವಯ ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನ/ ಚೀನಾಗೆ ವಲಸೆ ಹೋದವರ ಭಾರತದ ಆಸ್ತಿ ಮೇಲೆ ಅವರ ಉತ್ತರಾಧಿಕಾರಿಗಳಿಗೆ ಯಾವುದೇ ಹಕ್ಕಿರುವುದಿಲ್ಲ.
ಲೋಕಸಭೆಯಲ್ಲಿ ಈ ಮಸೂದೆಗೆ ಈಗಾಗಲೇ ಅನುಮೋದನೆ ನೀಡಲಾಗಿತ್ತು. ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜ್ಯಸಭೆ ಕೆಲವು ತಿದ್ದುಪಡಿಗಳನ್ನು ಸೂಚಿಸಿತು. ಆ ತಿದ್ದುಪಡಿಗಳಿಗೆ ಇಂದು ಕೆಳಮನೆ ಅನುಮೋದನೆ ನೀಡಿದೆ.
ಈ ಮಸೂದೆ ಪ್ರಕಾರ ಶತ್ರುಗಳ ಸಂಬಂಧಿಕರು ಅಥವಾ ಅವರ ಪರವಾಗಿ ಯಾರು ನೋಡಿಕೊಳ್ಳುತ್ತಿರುತ್ತಾರೋ ಇನ್ಮುಂದೆ ಅವರಿಗೆ ಆಸ್ತಿಯ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಅದನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಗಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸಲಾಗುತ್ತದೆ.
