Asianet Suvarna News Asianet Suvarna News

ಗದಗ ಪೊಲೀಸ್ ಠಾಣೆ ದೌರ್ಜನ್ಯ ಪ್ರಕರಣ :ಎಸ್ಐ ಹಾಗೂ ಚಾಲಕ ಅಮಾನತು

ಘಟನಾ ಸ್ಥಳಕ್ಕೆ ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ಆಗಮಿಸಿದ್ದು,ಮೃತನ ಶವ ಮರೋಣೋತ್ತರ ಪರೀಕ್ಷೆಗೆ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ.  ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ಕೊಪ್ಪಳ ಧಾರವಾಡ ಹಾವೇರಿ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಪಡೆಗಳು ಆಗಮಿಸಿವೆ.

Lockup Death case Two Cop Suspend

ಗದಗ(ಫೆ.05): ಜಿಲ್ಲೆಯ ಲಕ್ಷ್ಮೇಶ್ವರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐ ಶಿವಾನಂದ್ ಹಾಗೂ ಚಾಲಕ ಪೂಜಾರಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಮೃತರ ಸಂಬಂಧಿಕರು ನೀಡಿದ ಮೇರೆಗೆ ಎಫ್ಐಆರ್ ದಾಖಲಿಸಲಾಗಿತ್ತು.ಶಿವಪ್ಪನ ಸಾವಿಗೆ ಇವರಿಬ್ಬರು ಕಾರಣವೆಂದು ದೂರು ದಾಖಲಾದ ಕಾರಣ ಉತ್ತರ ವಲಯ ಐಜಿಪಿ ರಾಮಚಂದ್ರರಾವ್ ಅಮಾನತು ಆದೇಶ ಹೊರಡಿಸಿದ್ದಾರೆ. ಸದ್ಯ ನಾಪತ್ತೆಯಾಗಿರುವ ಇಬ್ಬರನ್ನು ಬಂಧಿಸಿಲು ಮೃತರ ಸಂಬಂಧಿಕರು ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ಆಗಮಿಸಿದ್ದು,ಮೃತನ ಶವ ಮರೋಣೋತ್ತರ ಪರೀಕ್ಷೆಗೆ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ.  ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ಕೊಪ್ಪಳ ಧಾರವಾಡ ಹಾವೇರಿ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಪಡೆಗಳು ಆಗಮಿಸಿವೆ.

ಲಾಕಪ್ ಡೆತ್ ಮಾಡಿದ್ದಾರೆಂಬ ಶಂಕೆಯ ಮೇಲೆ ಆಕ್ರೋಶಿತರಾದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ,ವಾಹನ ಹಾಗೂ ಬೈಕ್'ಗಳನ್ನು ಬೆಂಕಿ ಹಚ್ಚಿದ್ದರು. ಕಳೆದ ರಾತ್ರಿ ಅಕ್ರಮವಾಗಿ ಮರಳು ಸಾಗಾಣಿಕೆ ದಾಳಿ ನಡೆದಿದ್ದು, ಈ ವೇಳೆ ಲಾರಿ ಚಾಲಕ ಶಿವಪ್ಪ ಗಾನಗೇರ ಎಂಬ ವ್ಯಕ್ತಿಯನ್ನು ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಬಂಧಿಸಿ, ವಿಚಾರಣೆಗೆಂದು ಕರೆ ತಂದಿದ್ದರು. ಆದರೆ  ವಿಚಾರಣೆ ವೇಳೆ ವ್ಯಕ್ತಿ ಸಾವನ್ನಪ್ಪಿದ್ದ.

Follow Us:
Download App:
  • android
  • ios