ಲಖನೌ[ಜೂ.13]: ಹಳಿತಪ್ಪಿದ್ದ ಸರಕು ಸಾಗಣೆ ರೈಲೊಂದರ ಬಗ್ಗೆ ವರದಿ ಮಾಡಲು ತೆರಳಿದ್ದ ಟೀವಿ ವಾಹಿನಿಯೊಂದರ ಪತ್ರಕರ್ತನ ಮೇಲೆ ರೈಲ್ವೆ ಪೊಲೀಸರು ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಶಾಮ್ಲಿ ನಗರದಲ್ಲಿ ನಡೆದಿದೆ.

ಈ ನಡುವೆ ಪೊಲೀಸರು ನನ್ನನ್ನು ವಿವಸ್ತ್ರನನ್ನಾಗಿ ಮಾಡಿ ಬಾಯಿಗೆ ಮೂತ್ರ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಪತ್ರಕರ್ತ ಅಮಿತ್‌ ಶರ್ಮಾ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ರೈಲ್ವೆ ಅಧಿಕಾರಿಗಳ ಹಗರಣವೊಂದನ್ನು ಕೆಲ ದಿನಗಳ ಹಿಂದೆ ಅಮಿತ್‌ ಬಯಲಿಗೆಳೆದಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮುಫ್ತಿಯಲ್ಲಿದ್ದ ರೈಲ್ವೆ ಪೊಲೀಸರಿಬ್ಬರು, ಮಂಗಳವಾರ ರಾತ್ರಿ ವರದಿಗೆಂದು ತೆರಳಿದ್ದ ಅಮಿತ್‌ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದಾರೆ.