ಹಾಸನ ಜಿಲ್ಲೆಯಲ್ಲಿ ಮತ್ತಷ್ಟು ಭದ್ರವಾಯ್ತು ಜೆಡಿಎಸ್ ​​ ಕೋಟೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Sep 2018, 4:58 PM IST
Local body election Jds dominate again in hasan
Highlights

ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಫಲಿತಾಂಶ ಮುಖ್ಯಮಂತ್ರಿ ಕುಮಾರಸ್ವಾಮಿ ಮುಖದಲ್ಲಿ ನಗು ಅರಳಿಸಿದೆ. ಹಾಸನ ಜಿಲ್ಲೆಯ 135 ವಾರ್ಡ್‌ಗಳಲ್ಲಿ 91 ವಾರ್ಡ್‌ಗಳಲ್ಲಿ ಗೆಲುವು ಸಾಧಿಸೋ ಮೂಲಕ ತೆನೆ ಹೊತ್ತ ಮಹಿಳೆ ಗಟ್ಟಿಯಾಗಿ ನೆಲೆಯೂರಿದ್ದಾಳೆ.

ಹಾಸನ(ಸೆ.03): ಬಹುನಿರೀಕ್ಷಿತ  ಕರ್ನಾಟ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕೆಲವೆಡೆ ಅನಿರೀಕ್ಷಿತ ಫಲಿತಾಂಶ ಹೊರಬಿದ್ದರೆ ಹಲವು ಜಿಲ್ಲೆಗಳಲ್ಲಿ ನಿರೀಕ್ಷಿತ ರಿಸಲ್ಟ್ ಬಂದಿದೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆ ಮತ್ತಷ್ಟು ಭದ್ರವಾಗಿದೆ. ಆದರೆ ಕಾಂಗ್ರೆಸ್ ಧೂಳೀಪಟವಾಗಿದೆ.

ವಿಶೇಷ ಅಂದರೆ ಹಾಸನ ನಗರ ಸಭೆಯಲ್ಲಿ ಜೆಡಿಎಸ್ ನಾಗಾಲೋಟಕ್ಕೆ ಬಿಜೆಪಿ ಬ್ರೇಕ್ ಹಾಕಿದೆ.  ಹಾಸನ ನಗರಸಭೆಯಲ್ಲಿ ಬಿಜೆಪಿ ಶಾಸಕ ಪ್ರೀತಂ ಜವರೇಗೌಡ ಹೊಡೆತಕ್ಕೆ ಜೆಡಿಎಸ್ ತತ್ತರಿಸಿದೆ. ಹಾಸನ ನಗರಸಭೆಯಲ್ಲಿ 9 ಸ್ಥಾನವಿದ್ದ ಕಾಂಗ್ರೆಸ್ 2 ಸ್ಥಾನಕ್ಕೆ ಕುಸಿದಿದೆ.  ಹೊಳನರಸೀಪುರದ ಒಟ್ಟು 23 ಸ್ಥಾನಗಳಲ್ಲಿ 23 ಸ್ಥಾನಗಳನ್ನು ಜೆಡಿಎಸ್ ಗೆದ್ದುಕೊಂಡಿದೆ . ಸಚಿವ ಎಚ್​.ಡಿ. ರೇವಣ್ಣ ಅವರ ಪ್ರಾಭಲ್ಯಕ್ಕೆ ಕಾಂಗ್ರೆಸ್​ಗಿಂತ ಬಿಜೆಪಿ ದೊಡ್ಡ ಸವಾಲು ಹಾಕಿದೆ.

ಹಾಸನದಲ್ಲಿ ಈ ಬಾರಿ ಜೆಡಿಎಸ್‌ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ. ನಗರಸಭೆಯ ಒಟ್ಟು 32 ಸ್ಥಾನಗಳ ಪೈಕಿ 18ರಲ್ಲಿ ಜೆಡಿಎಸ್ ಪ್ರಯಾಸದ ಗೆಲುವು ಸಾಧಿಸಿದ್ದರೆ, 12ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಳೆದ ಬಾರಿ ಜೆಡಿಎಸ್ 19 ಸ್ಥಾನಗಳನ್ನ ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 12ಕ್ಕೇರಿದೆ. ಹೀಗಾಗಿ ಹಾಸನ ನಗರಸಭೆ ಜೆಡಿಎಸ್ ಪಾಲಾಗಿದ್ದರೂ, ಬಿಜೆಪಿ ಭರ್ಜರಿ ಮೇಲುಗೈ ಸಾಧಿಸಿದೆ. ಕಳೆದ ಬಾರಿ 9 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಸಚಿವ ರೇವಣ್ಣ ಸ್ವಕ್ಷೇತ್ರ ಹೊಳೇನರಸಿಪುರ ಕ್ಷೇತ್ರದಲ್ಲಿ ಜೆಡಿಎಸ್ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿದೆ. ಇಲ್ಲಿ ರೇವಣ್ಣ  ಪತ್ನಿ ಭವಾನಿ ರೇವಣ್ಣ ಉಸ್ತುವಾರಿ ಹೊತ್ತಿದ್ದರು. ಇದೀಗ 23 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳನ್ನ ಗೆಲ್ಲೋ ಮೂಲಕ ಭವಾನಿ ರೇವಣ್ಣ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 

ಹಾಸನ ನಗರ ಸಭೆ - ಒಟ್ಟು -35
ಜೆಡಿಎಸ್ -17
ಬಿಜೆಪಿ-12
ಕಾಂಗ್ರೆಸ್-2
ಇತರೆ-3

ಅರಸೀಕರೆ ನಗರಸಭೆ-ಒಟ್ಟು-31
ಜೆಡಿಎಸ್ -22
ಬಿಜೆಪಿ-5
ಕಾಂಗ್ರೆಸ್-1
ಇತರೆ-3

ಸಕಲೇಶಪುರ ಪುರಸಭೆ: ಒಟ್ಟು-23
ಜೆಡಿಎಸ್ -14
ಬಿಜೆಪಿ-2
ಕಾಂಗ್ರೆಸ್-4
ಇತರೆ-3

ಚನ್ನರಾಯಪಟ್ಟಣ ಪುರಸಭೆ: ಒಟ್ಟು-23
ಜೆಡಿಎಸ್ -15
ಬಿಜೆಪಿ-00
ಕಾಂಗ್ರೆಸ್-8

ಹೊಳೆನರಸೀಪುರ ಪುರಸಭೆ: ಒಟ್ಟು-23
ಜೆಡಿಎಸ್ -23
ಬಿಜೆಪಿ-00
ಕಾಂಗ್ರೆಸ್-00

loader