ರಾಜ್ಯದಲ್ಲಿ ಮತ್ತೊಂದು ಮೈತ್ರಿಗೆ ಸಿದ್ಧತೆಯನ್ನು ನಡೆಸಲಾಗಿದೆ. ಆಡಳಿತದಲ್ಲಿ ಹೊಂದಾಣಿಕೆಯ ಉದ್ದೇಶದಿಂದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ  ಅಂತತ್ರವಾದ ಕಡೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳು ನಿರ್ಧರಿಸಿವೆ

ಬೆಂಗಳೂರು : ಮೈಸೂರು, ಶಿವಮೊಗ್ಗ, ತುಮಕೂರು ನಗರ ಪಾಲಿಕೆ, ನಗರ ಸಭೆಗಳು, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ಸೇರಿದಂತೆ 105 ಸ್ಥಳೀಯ ಸಂಸ್ಥೆಗಳಿಗೆ ನಡೆದಿರುವ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಕಡೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳಲು ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಕಾಂಗ್ರೆಸ್‌ಗೆ ಬಹುಮತ ಬರುವ ಕಡೆ ಕಾಂಗ್ರೆಸ್‌ ಅಧಿಕಾರ ರಚಿಸಲಿದೆ. ಜೆಡಿಎಸ್‌ ಬಹುಮತ ಬರುವ ಕಡೆ ಜೆಡಿಎಸ್‌ ಆಡಳಿತ ರಚಿಸುತ್ತದೆ. ಅತಂತ್ರ ಸ್ಥಿತಿ ನಿರ್ಮಾಣವಾದ ಕಡೆ ಕಾಂಗ್ರೆಸ್‌-ಜೆಡಿಎಸ್‌ ಕೂಡಿ ಆಡಳಿತ ನಡೆಸಲು ತೀರ್ಮಾನಿಸಲಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಫ್ರೆಂಡ್ಲಿ ಫೈಟ್‌ ಮಾಡಿದ್ದರೂ, ಫಲಿತಾಂಶ ಅತಂತ್ರವಾಗಿರುವ ಕಡೆ ಜೆಡಿಎಸ್‌-ಕಾಂಗ್ರೆಸ್‌ ಜತೆಗೂಡಿ ಅಧಿಕಾರ ಹಿಡಿಯಲು ನಿರ್ಧಾರವಾಗಿದೆ.