ಬಿಜಿಂಗ್(ಆ.01): ಸಾಂಸ್ಕೃತಿಕ ಏಕಸ್ವಾಮ್ಯತೆಗೆ ಒತ್ತು ನೀಡುತ್ತಿರುವ ಚೀನಾ ಕಮ್ಯೂನಿಸ್ಟ್ ಸರ್ಕಾರ, ಅರೆಬಿಕ್ ಭಾಷೆಯಲ್ಲಿರುವ ಎಲ್ಲಾ ನಾಮಫಲಕಗಳನ್ನು ತೆಗೆಯುವಂತೆ ರಾಜಧಾನಿ ಬಿಜಿಂಗ್’ನಲ್ಲಿರುವ ಹೊಟೇಲ್’ಗಳಿಗೆ ಆದೇಶ ನೀಡಿದೆ.

ಹೋಟೆಲ್ ನಾಮಫಲಕಗಳ ಮೇಲಿರುವ ಅರೆಬಿಕ್ ಭಾಷೆಯ ಪದಗಳು, ಇಸ್ಲಾಂಗೆ ಸಂಬಂಧಿಸಿದ ಚಿಹ್ನೆಗಳನ್ನು ತೆರೆಯುವಂತೆ ಬಿಜಿಂಗ್ ಸ್ಥಳೀಯ ಆಡಳಿತ ಆದೇಶ ನೀಡಿದೆ. ಅಲ್ಲದೇ ಹಲಾಲ್ ಶಬ್ಧ ಬಳಸಿರುವ ಎಲ್ಲಾ ನಾಮಫಲಕಗಳನ್ನು ಬದಲಾಯಿಸುವಂತೆಯೂ ಆದೇಶ ನೀಡಲಾಗಿದೆ.

ಸುಮಾರು 20 ಮಿಲಿಯನ್ ಜಸಂಖ್ಯೆ ಹೊಂದಿರುವ ಚೀನಾದ ಮುಸ್ಲಿಂ ಸಮುದಾಯದ ಮೇಲೆ ಚೀನಾ ಸರ್ಕಾರ ಕಣ್ಣಿಟ್ಟಿದ್ದು, ಇಸ್ಲಾಂ ಮೂಲಕ ವಿದೇಶಿ ಸಂಸ್ಕೃತಿ ದೇಶದೊಳಕ್ಕೆ ನುಸುಳುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿದೆ.

ಅದರಲ್ಲೂ ಚೀನಾದ ಉಯಿಗರ್ ಮುಸ್ಲಿಂ ಸಮುದಾಯ ಹಾಗೂ ಸ್ಥಳೀಯ ಹಾನ್ ಸಮುದಾಯದ ನಡುವೆ ಬಿಕ್ಕಟ್ಟು ಉದ್ಭವಿಸಿದ ಬಳಿಕ, ಚೀನಾ ಸರ್ಕಾರ ಅಲ್ಪಸಂಖ್ಯಾಥ ಸಮುದಾಯದ ಪ್ರಭಾವ ತಗ್ಗಿಸುವ ಯೋಜನೆ ಕೈಗೆತ್ತಿಕೊಂಡಿದೆ ಎನ್ನಲಾಗಿದೆ.