ಅಧಿಕಾರಿಯ ಬೇಜವಾಬ್ದಾರಿ ಮಾತುಗಳಿಂದ ಮನನೊಂದ ತೊಗರಿ ಬೆಳೆಗಾರನೊಬ್ಬ, ಅಧಿಕಾರಿ ಹಾಗೂ ಪೊಲೀಸರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ(ಜೂ.10): ಅಧಿಕಾರಿಯ ಬೇಜವಾಬ್ದಾರಿ ಮಾತುಗಳಿಂದ ಮನನೊಂದ ತೊಗರಿ ಬೆಳೆಗಾರನೊಬ್ಬ, ಅಧಿಕಾರಿ ಹಾಗೂ ಪೊಲೀಸರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ನಗರದ APMC ಯಲ್ಲಿ, ಹಾವೇರಿ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮದ ಸುಮಾರು 10 ಕ್ಕು ಹೆಚ್ಚು ರೈತರು ತೊಗರಿ ಬೇಳೆ ಖರೀದಿಸುವಂತೆ ಅಧಿಕಾರಿಗಳ ಬೆನ್ನುಬಿದ್ದಿದ್ದರು. ಆದರೆ ಖರೀದಿ ಕೇಂದ್ರದ ಅಧಿಕಾರಿ ಶಿವರಾಜ ಬಳಿಗಾರ, ನಮಗೆ ಯಾವುದೇ ಆದೇಶವಿಲ್ಲ ಅಂತ ರೈತರಿಗೆ ಸಬೂಬು ಹೇಳುತ್ತಿದ್ದರು.
ಇದರಿಂದ ಮನನೊಂದ ಹಾವೇರಿ ತಾಲೂಕಿನ ಕುರಬಗೊಂಡದ ರೈತ ಮಂಜುನಾಥ ಹೆಡಿಯಾಲ, ಅಧಿಕಾರಿ ಹಾಗೂ ಪೊಲೀಸರ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ವಿಷ ಸೇವಿಸಿದ ರೈತನನ್ನು ಪೊಲೀಸರು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು ರೈತನ ಸ್ಥಿತಿ ಚಿಂತಾಜನಕವಾಗಿದೆ.
