ವಯಸ್ಕ ಜೋಡಿಗೆ ಮದುವೆ ಆಗದೆಯೂ ಜೊತೆಯಾಗಿ ವಾಸಿಸುವ ಹಕ್ಕಿದೆ. ಲಿವ್-ಇನ್ ಸಂಬಂಧವನ್ನು ಶಾಸಕಾಂಗ ಕೂಡ ಒಪ್ಪಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.  

ನವದೆಹಲಿ: ವಯಸ್ಕ ಜೋಡಿಗೆ ಮದುವೆ ಆಗದೆಯೂ ಜೊತೆಯಾಗಿ ವಾಸಿಸುವ ಹಕ್ಕಿದೆ. ಲಿವ್-ಇನ್ ಸಂಬಂಧವನ್ನು ಶಾಸಕಾಂಗ ಕೂಡ ಒಪ್ಪಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಂದಕುಮಾರ್ ಎಂಬಾತನಿಗೆ 21 ವರ್ಷ ಆಗಿಲ್ಲ ಎಂಬ ಕಾರಣಕ್ಕೆ ತುಷಾರ ಎಂಬಾಕೆಯ ಜೊತೆಗಿನ ಆತನ ಮದುವೆ ರದ್ದುಗೊಳಿಸಿ, ಆಕೆಯನ್ನು ಹೆತ್ತವರ ವಶಕ್ಕೆ ಒಪ್ಪಿಸಲಾಗಿತ್ತು. ಆದರೆ 21 ವಯಸ್ಸು ಆಗಿಲ್ಲ ಎಂದ ಮಾತ್ರಕ್ಕೆ ಮದುವೆ ಅಸಿಂಧು ಎನ್ನುವಂತಿಲ್ಲ.

ಕಾನೂನು ಪ್ರಕಾರ ಇದೊಂದು ಅಸಿಂಧುಗೊಳಿಸಬಹುದಾದ ಮದುವೆಯಾಗಿದ್ದರೂ, ಇಬ್ಬರು ಕೂಡ ವಯಸ್ಕರಾಗಿರುವುದರಿಂದ ಅವರಿಗೆ ಜೊತೆಯಾಗಿ ವಾಸಿಸುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿ, ಹೈಕೋರ್ಟ್ ಆದೇಶ ವಜಾಗೊಳಿಸಿದೆ.