ವರ 2.5 ಅಡಿ, ವಧು 2 ಅಡಿ : ಕೋಲಾರದಲ್ಲೊಂದು ವಿಶಿಷ್ಟ ವಿವಾಹ

First Published 26, Jun 2018, 12:25 PM IST
Little couple marriage at Kolar
Highlights
  • 2 ದಿನಗಳ ಹಿಂದೆ ಹೊಸಕೋಟೆಯ ಜಡಿಗೇನಹಳ್ಳಿಯ ನೆರವೇರಿದ್ದ ಕುಬ್ಜ ಜೋಡಿಯ ಮದುವೆ
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಫೋಟೊ 

 

 

 

ಮಾಲೂರು[ಜೂ.26]: ವರನ ಎತ್ತರ 2.5 ಅಡಿಯಾದರೆ, ವಧುವಿನ ಎತ್ತರ 2 ಅಡಿ... ಇಂತಿಪ್ಪಾ ಕುಬ್ಜ ಜೋಡಿ ವಿವಾಹಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯ ಪುರಾಣ ಪ್ರಸಿದ್ಧ ಕಾಲಭೈರೇಶ್ವರ ಸನ್ನಿಧಿ ಸಾಕ್ಷಿಯಾಯಿತು.

ಮಾಲೂರು ತಾಲೂಕಿನ ಯಶವಂತಪುರದ ಅನಿಲ್ ಕುಮಾರ್ (26) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರದ ವರಲಕ್ಷ್ಮಿ (22) ಅವರ ವಿವಾಹ ಸೋಮವಾರ ನೆರವೇರಿತು.

ಗುರುವಾರವಷ್ಟೇ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು. ಸಾಮಾಜಿಕ ತಾಣಗಳಲ್ಲಿ ಫೋಟೋಗಳು ವೈರಲ್ ಆಗಿದ್ದವು. ಇದೀಗ ಮದುವೆ ಫೋಟೋಗಳಿಗೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

loader