Asianet Suvarna News Asianet Suvarna News

ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ದಿಗೊಳ್ಳಲಿರುವ ಬೆಂಗಳೂರಿನ 50 ರಸ್ತೆಗಳ ಪಟ್ಟಿ

ಟೆಂಡರ್SURE(Specifications for Urban Road Execution) ಎಂಬುದು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಮಾನದಂಡವಾಗಿದೆ. ವಾಹನಸವಾರರು ಮತ್ತು ಪಾದಚಾರಿಗಳಿಗೆ ಸುಲಭವಾಗಿ ಸಾಗಲು ಅನುವು ಮಾಡಿಕೊಡುವ ರಸ್ತೆ ವಿಧಾನವಾಗಿದೆ. ಜನ ಯುಎಸ್'ಪಿ ಎಂಬ ಸಂಸ್ಥೆಯೊಂದು 2011ರಲ್ಲಿ ರಸ್ತೆ ನಿರ್ಮಾಣದ ಮಾನದಂಡಗಳನ್ನು ಪ್ರಸ್ತಾವಿಸಿತ್ತು.

list of 50 roads to be developed in tendersure model

ಬೆಂಗಳೂರು(ಮೇ 17): ಅಂತಾರಾಷ್ಟ್ರೀಯ ಗುಣಮಟ್ಟದ ಟೆಂಡರ್'ಶೂರ್ ಮಾನದಂಡದ ರಸ್ತೆಗಳನ್ನು ಬೆಂಗಳೂರಿನಲ್ಲಿ ಅಳವಡಿಸಲು ಬಿಬಿಎಂಪಿ ಕಾರ್ಯನಿರತವಾಗಿದೆ. ಈಗಾಗಲೇ ನಗರದ 9 ರಸ್ತೆಗಳು ಟೆಂಡರ್'ಶೂರ್ ಮಾದರಿಯಲ್ಲಿ ಅಭಿವೃದ್ಧಿಗೊಂಡಿದ್ದು, 3 ರಸ್ತೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆಗಳ ಯಶಸ್ಸಿನಿಂದ ಪ್ರೇರಿತಗೊಂಡಿರುವ ಬಿಬಿಎಂಪಿ ನಗರಾದ್ಯಂತ ಇನ್ನೂ 50 ಕಡೆ ಇಂಥ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಕೆಲ ರಸ್ತೆಗಳಿಗೆ ಟೆಂಡರ್ ಆಹ್ವಾನಿಸಿದೆ. ಇನ್ನೂ ಕೆಲ ರಸ್ತೆಗಳಲ್ಲಿ ಡಿಪಿಆರ್ ಸಿದ್ಧಗೊಳ್ಳುತ್ತಿದೆ.

ಏನಿದು ಟೆಂಡರ್'ಶೂರ್ ರಸ್ತೆ?
ಟೆಂಡರ್'ಶೂರ್ - (ಶೂರ್-SURE - Specifications for Urban Road Execution) ಎಂಬುದು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಮಾನದಂಡವಾಗಿದೆ. ವಾಹನಸವಾರರು ಮತ್ತು ಪಾದಚಾರಿಗಳಿಗೆ ಸುಲಭವಾಗಿ ಸಾಗಲು ಅನುವು ಮಾಡಿಕೊಡುವ ರಸ್ತೆ ವಿಧಾನವಾಗಿದೆ. ಜನ ಯುಎಸ್'ಪಿ ಎಂಬ ಸಂಸ್ಥೆಯೊಂದು 2011ರಲ್ಲಿ ರಸ್ತೆ ನಿರ್ಮಾಣದ ಮಾನದಂಡಗಳನ್ನು ಪ್ರಸ್ತಾವಿಸಿತ್ತು. ಟೆಂಡರ್ ಮೂಲಕ ಕಾಮಗಾರಿ ವಿತರಣೆ ನಡೆಯುತ್ತದೆ. ಟೆಂಡರ್ ಪಡೆಯುವ ಸಂಸ್ಥೆಯು ಶೂರ್ ಮಾನದಂಡಗಳನುಸಾರ ರಸ್ತೆ ಅಭಿವೃದ್ಧಿಪಡಿಸಬೇಕಾಗುತ್ತದೆ.

ಸರಿಯಾದ ರೀತಿಯ ವಿಸ್ತೃತ ಫೂಟ್'ಪಾಥ್/ಪಾದಚಾರಿ ಮಾರ್ಗದ ನಿರ್ಮಾಣ; ಫುಟ್'ಪಾಥ್ ಅಡಿಯಲ್ಲಿ ವಿದ್ಯುತ್, ನೀರು, ಚರಂಡಿ ಇತ್ಯಾದಿ ಅಗತ್ಯ ಸೌಕರ್ಯಗಳ ಅಭಿವೃದ್ಧಿ; ಎಲ್'ಇಡಿ ಬೀದಿ ದೀಪಗಳ ಅಳವಡಿಕೆ; ಮಳೆ ನೀರು ರಸ್ತೆಯ ಮೇಲೆ ನಿಲ್ಲದ ರೀತಿಯಲ್ಲಿ ಎರಡೂ ಕಡೆ ಸರಿಯಾದ ಚರಂಡಿ ವ್ಯವಸ್ಥೆ; ಪ್ರತ್ಯೇಕ ಸೈಕಲ್ ಟ್ರ್ಯಾಕ್ ಇತ್ಯಾದಿಗಳು ಈ ರಸ್ತೆಯ ವೈಶಿಷ್ಟ್ಯ.

ಪೂರ್ಣಗೊಂಡಿರುವ ಮತ್ತು ಚಾಲನೆಯಲ್ಲಿರುವ ಕಾಮಗಾರಿಗಳು
1) ರೆಸಿಡೆನ್ಸಿ ರಸ್ತೆ
2) ರಿಚ್ಮಂಡ್ ರಸ್ತೆ
3) ಮ್ಯೂಸಿಯಮ್ ರಸ್ತೆ
4) ಕನಿಂಗ್'ಹ್ಯಾಂ ರಸ್ತೆ
5) ಸೇಂಟ್ ಮಾರ್ಕ್ಸ್ ರಸ್ತೆ
6) ವಿಠಲ್ ಮಲ್ಯ ಹಾಸ್ಪಿಟಲ್ ರಸ್ತೆ
7) ಕಮಿಷನರಿಯಾಟ್ ರಸ್ತೆ
8) ನೃಪತುಂಗ ರಸ್ತೆ
9) ಕೆ.ಜಿ.ರಸ್ತೆ
10) ಮೋದಿ ಆಸ್ಪತ್ರೆ ರಸ್ತೆ
11) ಸಿದ್ದಯ್ಯ ಪುರಾಣಿಕ್ ರಸ್ತೆ
12) ಜಯನಗರ 11ನೇ ಮುಖ್ಯರಸ್ತೆ

ಪ್ರಸ್ತಾವನೆಯ ಹಂತದಲ್ಲಿರುವ 50 ರಸ್ತೆಗಳು
1) ವಿಕ್ಟೋರಿಯಾ ರಸ್ತೆ - ಡಿಸೋಜ ಸರ್ಕಲ್'ನಿಂದ ಎಎಸ್'ಸಿ ಸೆಂಟರ್'ವರೆಗೆ
2) ಬ್ರಿಗೇಡ್ ರಸ್ತೆ - ಶೂಲೇ ಸರ್ಕಲ್'ನಿಂದ ಎಂಜಿ ರಸ್ತೆವರೆಗೆ
3) ಲಾಲ್'ಬಾಗ್ ರಸ್ತೆ - ಸುಬ್ಬಯ್ಯ ಸರ್ಕಲ್'ನಿಂದ ಕ್ರುಂಬಿಗಲ್ ರಸ್ತೆ ಮೂಲಕ ಲಾಲ್'ಬಾಗ್ ವೆಸ್ಟ್ ಗೇಟ್'ವರೆಗೆ
4) ಇನ್'ಫ್ಯಾಂಟ್ರಿ ರಸ್ತೆ - ರಾಜಭವನ ರಸ್ತೆಯಿಂದ ಸಫೀನಾ ಪ್ಲಾಜಾವರೆಗೆ
5) ಕೆಎಚ್ ರಸ್ತೆ - ರಿಚ್ಮಂಡ್ ರಸ್ತೆಯಿಂದ ಲಾಲ್'ಬಾಗ್ ಗೇಟ್'ವರೆಗೆ
6) ರಾಜಾ ರಾಮ್ ಮೋಹನ್ ರಾಯ್ ರಸ್ತೆ - ಹಡ್ಸನ್ ಸರ್ಕಲ್'ನಿಂದ ರಿಚ್ಮಂಡ್ ಸರ್ಕಲ್'ವರೆಗೆ
7) ಸುಬೇದಾರ್ ಛತ್ರಂ ರಸ್ತೆ - ಕೆ.ಜಿ.ಸರ್ಕಲ್'ನಿಂದ ಶೇಷಾದ್ರಿಪುರಂ ಸರ್ಕಲ್ ಮೂಲಕ ರಾಜೀವ್ ಗಾಂಧಿ ಸರ್ಕಲ್'ವರೆಗೆ.
8) ಇಂದಿರಾನಗರ 100 ಫೀಟ್ ರಸ್ತೆ - ಹಳೆಯ ಏರ್'ಪೋರ್ಟ್ ರಸ್ತೆಯಿಂದ ಓಲ್ಡ್ ಮದ್ರಾಸ್ ರಸ್ತೆವರೆಗೆ
9) ಹಲಸೂರು ರಸ್ತೆ ಮತ್ತು ಡಿಕೆನ್ಸನ್ ರಸ್ತೆ
10) ಹಲಸೂರು ಕೆರೆ ಅಕ್ಕಪಕ್ಕದಲ್ಲಿರುವ ಅಣ್ಣಾಸ್ವಾಮಿ ಮುದಲಿಯಾರ್ ರಸ್ತೆ, ಗಂಗಾಧರ್ ಚೆಟ್ಟಿ ರಸ್ತೆ, ಕೆನ್ಸಿಂಗ್ಟನ್ ರಸ್ತೆ.
11) ಕೋರಮಂಗಲ 20ನೇ ಮುಖ್ಯರಸ್ತೆ - ಹೊಸೂರು ರಸ್ತೆ(ಫೋರಂ ಮಾಲ್)ಯಿಂದ 80ಅಡಿ ರಸ್ತೆವರೆಗೆ
12) ಕೋರಮಂಗಲ 80 ಅಡಿ ರಸ್ತೆ - ಈಜಿಪುರ ಮುಖ್ಯರಸ್ತೆಯಿಂದ ಸೋನಿ ವರ್ಲ್ಡ್ ಜಂಕ್ಷನ್ ಮೂಲಕ ಸರ್ಜಾಪುರ ಮುಖ್ಯರಸ್ತೆವರೆಗೆ.
13) ನರಸಿಂಹರಾಜ ರಸ್ತೆ - ಟೌನ್'ಹಾಲ್'ನಿಂದ ಕೆಆರ್ ಮಾರ್ಕೆಟ್'ವರೆಗೆ
14) ರಾಜಭವನ ರಸ್ತೆ - ಮಿನ್ಸ್'ಕ್ ಸ್ಕ್ವಯರ್'ನಿಂದ ಬಸವೇಶ್ವರ ಸರ್ಕಲ್'ವರೆಗೆ
15) ಡಾ. ಬಿಆರ್ ಅಂಬೇಡ್ಕರ್ ಬೀದಿ - ಕೆಆರ್ ಸರ್ಕಲ್'ನಿಂದ ಬಾಳೇಕುಂದ್ರಿ ಸರ್ಕಲ್'ವರೆಗೆ
16) ಗುಬ್ಬಿ ತೋಟದಪ್ಪ ರಸ್ತೆ - ಖೋಡೆ ಸರ್ಕಲ್'ನಿಂದ ಶಾಂತಲಾ ಸಿಲ್ಕ್ ಸರ್ಕಲ್ ಮತ್ತು ಉಪ್ಪಾರ್'ಪೇಟೆ ಪೊಲೀಸ್ ಠಾಣೆವರೆಗೆ.
17) ಪ್ಯಾಲೇಸ್ ರಸ್ತೆ - ಮೈಸೂರ್ ಬ್ಯಾಂಕ್ ಸರ್ಕಲ್'ನಿಂದ ಟಿ.ಚೌಡಯ್ಯ ರೋಡ್ ಜಂಕ್ಷನ್'ವರೆಗೆ
18) ಕ್ವೀನ್ಸ್ ರಸ್ತೆ - ಎಂಜಿ ರಸ್ತೆಯಿಂದ ಕಂಟೋನ್ಮೆಂಟ್ ರೈಲ್ವೆ ಸ್ಟೇಶನ್'ವರೆಗೆ
19) ರೇಸ್ ಕೋರ್ಸ್ ರಸ್ತೆ - ಸುಬ್ಬಣ್ಣ ಸರ್ಕಲ್'ನಿಂದ ಬಸವೇಶ್ವರ ಸರ್ಕಲ್'ವರೆಗೆ (ಚಾಲುಕ್ಯ ಹೋಟೆಲ್)
20) ಶೇಷಾದ್ರಿ ರಸ್ತೆ - ಸಂಗೊಳ್ಳಿ ರಾಯಣ್ಣ ಸರ್ಕಲ್'ನಿಂದ ಕೆಆರ್ ಸರ್ಕಲ್'ವರೆಗೆ
21) ಕೆಜಿ ರಸ್ತೆ - ಮೈಸೂರ್ ಬ್ಯಾಂಕ್'ನಿಂದ ಉಪ್ಪಾರಪೇಟೆ ಪೊಲೀಸ್ ಠಾಣೆವರೆಗೆ.
22) ಧನ್ವಂತರಿ ರಸ್ತೆ - ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ಆನಂದರಾವ್ ಸರ್ಕಲ್'ವರೆಗೆ
23) ಎನ್.ಆರ್.ಸ್ಕ್ವಯರ್ (ಸುತ್ತಮುತ್ತಲ ಪ್ರದೇಶಗಳು)
24) ಕಲಾಸಿಪಾಳ್ಯ ಮುಖ್ಯರಸ್ತೆ - ಕೆಆರ್ ಮಾರ್ಕೆಟ್'ನಿಂದ ಸಜ್ಜನ್'ರಾವ್ ಸರ್ಕಲ್'ವರೆಗೆ
25) ಕೆಆರ್ ರಸ್ತೆ - ಸಿಟಿ ಮಾರ್ಕೆಟ್'ನಿಂದ ನೆಟ್ಟಕಲ್ಲಪ್ಪ ಸರ್ಕಲ್'ವರೆಗೆ
26) ಎಂಜಿ ರಸ್ತೆ ಮತ್ತು ಕಸ್ತೂರಬಾ ರಸ್ತೆ - ಸಿದ್ದಲಿಂಗಯ್ಯ ಸರ್ಕಲ್'ನಿಂದ ಕ್ವೀನ್ಸ್ ಸ್ಟ್ಯಾಚ್ಯೂ ಮೂಲಕ ಟ್ರಿನಿಟಿ ಸರ್ಕಲ್'ವರೆಗೆ
27) ಜಯನಗರ ಈಸ್ಟ್ ಎಂಡ್ ರಸ್ತೆ - ತಿಲಕ್ ನಗರ್ ಮುಖ್ಯರಸ್ತೆಯಿಂದ ಜಯನಗರ 45ನೇ ಕ್ರಾಸ್'ವರೆಗೆ
28) ಸಂಪಿಗೆ ರಸ್ತೆ - ರಾಜೀವ್ ಗಾಂಧಿ ಸ್ಟ್ಯಾಚ್ಯೂ ಸರ್ಕಲ್'ನಿಂದ ಸ್ಯಾಂಕಿ ಟ್ಯಾಂಕ್ ರಸ್ತೆವರೆಗೆ
29) ಮಾರ್ಗೊಸಾ ರಸ್ತೆ - ಕೆಸಿ ಜನರಲ್ ಆಸ್ಪತ್ರೆಯಿಂದ ಮಾರಮ್ಮ ಸರ್ಕಲ್'ವರೆಗೆ
30) ಪಿ.ಕಾಳಿಂಗರಾವ್ ರಸ್ತೆ(ಮಿಷನ್ ರಸ್ತೆ) - ಬಿಬಿಎಂಪಿ ಮುಖ್ಯಕಚೇರಿಯಿಂದ ಕೆಎಚ್ ರಸ್ತೆವರೆಗೆ
31) ಬಾಣಸವಾಡಿ ಮುಖ್ಯರಸ್ತೆ (ಐಟಿಸಿ ಫ್ಯಾಕ್ಟರಿಯಿಂದ ಔಟರ್ ರಿಂಗ್ ರಸ್ತೆವರೆಗೆ)
32) ಗಾಂಧಿನಗರ 2ನೇ ಮುಖ್ಯರಸ್ತೆ (ಕೆ.ಜಿ.ರಸ್ತೆಯಿಂದ ಸುಬ್ಬಣ್ಣ ಸರ್ಕಲ್'ವರೆಗೆ)
33) ಕಾಳಿದಾಸ ರಸ್ತೆ (ಕೆಜಿ ರಸ್ತೆಯಿಂದ ಶೇಷಾದ್ರಿ ರಸ್ತೆ)
34) ಅವೆನ್ಯೂ ರಸ್ತೆ (ಕೆಜಿ ರಸ್ತೆಯಿಂದ ಕೆಆರ್ ಮಾರ್ಕೆಟ್'ವರೆಗೆ)
35) ಎಂಕೆಕೆ ರಸ್ತೆ - ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ಲಿಂಕ್ ರಸ್ತೆವರೆಗೆ
36) ಯಶವಂತಪುರ 1ನೇ ಮುಖ್ಯರಸ್ತೆ
37) ಗ್ರಾಫೈಟ್ ಇಂಡಿಯಾ ರಸ್ತೆ - ಕುಂದಲಹಳ್ಳಿಯಿಂದ ಹೂಡಿ ಜಂಕ್ಷನ್/ಎಬಿಬಿ ಜಂಕ್ಷನ್'ವರೆಗೆ
38) ಮಿಲ್ಲರ್ಸ್ ರಸ್ತೆ - ಚಾಲುಕ್ಯ ಸರ್ಕಲ್'ನಿಂದ ಕಂಟೋನ್ಮೆಂಟ್'ವರೆಗೆ
39) ಬಾಳೆಕುಂದ್ರಿ ಸರ್ಕಲ್'ನಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ
40) ಕಾಮರಾಜ್ ರಸ್ತೆ - ಎಂಜಿ ರಸ್ತೆಯಿಂದ ಅಸ್ಸಾಯೆ ರೋಡ್ ಜಂಕ್ಷನ್'ವರೆಗೆ
41) ಬಿವಿಕೆ ಅಯ್ಯಂಗಾರ್ ರಸ್ತೆ ಮತ್ತು ಎಎಸ್ ಚಾರ್ ರಸ್ತೆ - ಕೆ.ಜಿ.ರಸ್ತೆಯಿಂದ ಮೈಸೂರು ರಸ್ತೆ
42) ಗಾಂಧಿಬಜಾರ್ ಮುಖ್ಯರಸ್ತೆ - ರಾಮಕೃಷ್ಣ ಆಶ್ರಮ ಸರ್ಕಲ್'ನಿಂದ ಕೆಆರ್ ರಸ್ತೆವರೆಗೆ
43) ಬುಲ್ ಟೆಂಪಲ್ ರಸ್ತೆ - ಚಾಮರಾಜಪೇಟೆಯಿಂದ ಬಿಎಂಎಸ್ ಕಾಲೇಜುವರೆಗೆ
44) ಶೇಷಾದ್ರಿಪುರಂ ಮುಖ್ಯರಸ್ತೆ - ಸ್ವಸ್ತಿಕ್ ಸರ್ಕಲ್'ನಿಂದ ಪ್ಯಾಲೇಸ್ ಗುಟ್ಟಳ್ಳಿವರೆಗೆ
45) ಮೈಸೂರು ರಸ್ತೆ - ಸ್ವಸ್ತಿಕ್ ಸರ್ಕಲ್'ನಿಂದ ಸೆಟಿಲೈಟ್ ಬಸ್ ನಿಲ್ದಾಣದವರೆಗೆ
46) ಹೊರ ವರ್ತುಲ ರಸ್ತೆ - ಕೆಂಗೇರಿ ಸೆಟಿಲೈಟ್ ಟೌನ್'ನಿಂದ ವಿಶ್ವೇಶ್ವರಯ್ಯ ಲೇಔಟ್ ಒಂದನೇ ಬ್ಲಾಕ್'ವರೆಗೆ (ಹೌಸಿಂಗ್ ಬೋರ್ಡ್ ಕಾಂಪ್ಲೆಕ್ಸ್)
47) ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್'ನಿಂದ ಟಿ.ಮರೀಗೌಡ ಜಂಕ್ಷನ್'ವರೆಗೆ (ಮಡಿವಾಳ ಹಳೆಯ ಚೆಕ್'ಪೋಸ್ಟ್)
48) ಚಂದ್ರಾಲೇಔಟ್ 80 ಅಡಿ ರಸ್ತೆ - ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ಚಂದ್ರಾ ಲೇಔಟ್ ಬಸ್ ನಿಲ್ದಾಣದ ಮೂಲಕ ನ್ಯಾಷನಲ್ ಲಾ ಸ್ಕೂಲ್(ನಾಗರಬಾವಿ ಸರ್ಕಲ್)ವರೆಗೆ.
49) ನಾಗರಬಾವಿ ಮುಖ್ಯರಸ್ತೆ - ವಿಜಯನಗರ ವಾಟರ್ ಟ್ಯಾಂಕ್'ನಿಂದ ಪ್ರಶಾಂತ್ ನಗರ ಮೂಲಕ ನಾಗರಬಾವಿ ಸರ್ಕಲ್'ವರೆಗೆ
50) ಮಾಗಡಿ ಮುಖ್ಯರಸ್ತೆ - ವೆಸ್ಟ್ ಆಫ್ ಕಾರ್ಡ್ ರೋಡ್ ಜಂಕ್ಷನ್'ನಿಂದ ಕಾಮಾಕ್ಷಿ ಪಾಳ್ಯ ಮೂಲಕ ಔಟರ್ ರಿಂಗ್ ರಸ್ತೆವರೆಗೆ.

ಟೆಂಡರ್ ಆಹ್ವಾನಿಸಿರುವ ರಸ್ತೆಗಳು:
ಸುಬೇದಾರ್ ಛತ್ರಂ ರಸ್ತೆ, ಗುಬ್ಬಿ ತೋಟದಪ್ಪ ರಸ್ತೆ, ಧನ್ವಂತರಿ ರಸ್ತೆ, ಹನುಮಂತಪ್ಪ ರಸ್ತೆ, ಗಾಂಧಿನಗರ ಮತ್ತು ಮೆಜೆಸ್ಟಿಕ್ ಸುತ್ತಲಿನ ರಸ್ತೆಗಳು ಹಾಗೂ ಕೆಆರ್ ಮಾರುಕಟ್ಟೆ ಸುತ್ತಲಿನ ರಸ್ತೆಗಳು.

ಡಿಪಿಆರ್ ಸಿದ್ಧಗೊಳ್ಳುತ್ತಿರುವ ರಸ್ತೆಗಳು:
ಕಲಾಸಿಪಾಳ್ಯ ಸುತ್ತಲಿನ ರಸ್ತೆಗಳು, ಬ್ರಿಗೇಡ್ ರಸ್ತೆ, ಮಲ್ಲೇಶ್ವರ ಮಾರ್ಗೋಸ ರಸ್ತೆ, ಪ್ಯಾಲೇಸ್ ರಸ್ತೆ.

Follow Us:
Download App:
  • android
  • ios