Asianet Suvarna News Asianet Suvarna News

ನಡು ಬೀದಿಯಲ್ಲಿ ಸಿಂಹಗಳ ಓಡಾಟ

2 ಸಿಂಹಗಳು ರಾತ್ರಿ ಗ್ರಾಮಗಳಿಗೆ ಬಂದು ಬೀದಿಯಲ್ಲಿ ಓಡಾಡುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ

Lions stray into residential areas

ಜುನಾಗಢ(ಅ.02): ಅರಣ್ಯ ನಾಶ ಮತ್ತು ಕಾಂಕ್ರೀಟ್ ನಾಡಿನ ನಿರ್ಮಾಣದಿಂದಾಗಿ ಕಾಡನ್ನೇ ನಂಬಿ ಬದುಕುತ್ತಿದ್ದ ಪ್ರಾಣಿಗಳು ನಾಡಿಗೆ ದಾಂಗುಡಿ ಇಡುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಗುಜರಾತ್`ನ ಜುನಾಗಢದಲ್ಲಿ 2 ಸಿಂಹಗಳು ರಾತ್ರಿ ಗ್ರಾಮಗಳಿಗೆ ಬಂದು ಬೀದಿಯಲ್ಲಿ ಓಡಾಡುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಂಹಗಳನ್ನ ಕಂಡು ಗಾಬರಿಗೊಂಡ ವ್ಯಕ್ತಿಯೊಬ್ಬ ಸದ್ದಿಲ್ಲದೆ ವಾಹನದಲ್ಲಿ ಕುಳಿತು ಮೊಬೈಲ್`ನಲ್ಲಿ ತೆಗೆದ ದೃಶ್ಯ ಇದಾಗಿದೆ.