ನವದೆಹಲಿ[ಮೇ.22]: ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಕಾಂಗ್ರೆಸ್‌ ಪಕ್ಷದ ಸೈದ್ಧಾಂತಿಕ ವಿರೋಧವಿದ್ದರೂ ಕಳೆದ ವರ್ಷ ನಾಗ್ಪುರದ ಆರ್‌ಎಸ್‌ಎಸ್‌ ಮುಖ್ಯ ಕಚೇರಿಗೆ ಭೇಟಿ ನೀಡಿದ್ದು ಏಕೆ? ಹಾಗೂ ತಮಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸುವ ಮುನ್ನ ನಡೆದ ಸ್ವಾರಸ್ಯಕರ ಘಟನೆಯನ್ನು ಮೊದಲ ಬಾರಿಗೆ ಬಹಿರಂಗ ಪಡಿಸಿದ್ದಾರೆ.

‘ನಾನು ಸಿಂಹದ ಗುಹೆಗೆ ಹೋಗಲು ಬಯಸಿದ್ದೆ ಮತ್ತು ಅವರು ತಪ್ಪುದಾರಿಯತ್ತ ಸಾಗುತ್ತಿದ್ದಾರೆ ಎಂದು ತೋರಿಸಿದ್ದೇನೆ’ ಎಂಬು ಪ್ರಣಬ್‌ ಮುಖರ್ಜಿ ಅವರ ಹೇಳಿಕೆಯನ್ನು ಎನ್‌ಡಿಟೀವಿಯ ಸಂಪಾದಕೀಯ ನಿರ್ದೇಶಕರಾಗಿರುವ ಸೋನಿಯಾ ಸಿಂಗ್‌ ಅವರು ಬರೆದಿರುವ ‘ಡಿಫೈನಿಂಗ್‌ ಇಂಡಿಯಾ: ಥ್ರ್ಯೂ ದೇರ್‌ ಐಸ್‌’ ಎಂಬ ಪುಸ್ತಕಗಲ್ಲಿ ಉಲ್ಲೇಖಿಸಲಾಗಿದೆ.

2018ರ ಜೂ.6ರಂದು ಪ್ರಣಬ್‌ ಮುಖರ್ಜಿ ನಾಗ್ಪುರದ ಆರ್‌ಎಸ್‌ ಕಚೇರಿಗೆ ಭೇಟಿ ನೀಡಿ ಭಾಷಣ ಮಾಡಿದ್ದರು. ಆರ್‌ಎಸ್‌ಎಸ್‌ ಬಗ್ಗೆ ಕಾಂಗ್ರೆಸ್‌ ಪಕ್ಷದ ಸೈದ್ಧಾಂತಿಕ ವಿರೋಧವಿದ್ದರೂ ಪ್ರಣಬ್‌ ಮುಖರ್ಜಿ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದೇಕೆ ಎಂಬ ಸಂಗತಿ ವ್ಯಾಪಕ ಚರ್ಚೆಯನ್ನೂ ಹುಟ್ಟುಹಾಕಿತ್ತು. ಆದರೆ, ಪ್ರಣಬ್‌ ಮುಖರ್ಜ ಅವರು ತಮ್ಮ ಭಾಷಣದ ಅಂತ್ಯದಲ್ಲಿ ‘ಭಾರತದ ಆತ್ಮ ಬಹುತ್ವ ಮತ್ತು ಸಹಿಷ್ಣುತೆಯ ಮೇಲೆ ಅವಲಂಬಿತವಾಗಿದೆ ಎಂಬ ಸಂದೇಶವನ್ನು ನೀಡಿದ್ದರು.

ಭಾರತ ರತ್ನ ನೀಡುವಾಗ ಏಗಿದ್ದೇನು?

ಪ್ರಣಬ್‌ ಮುಖರ್ಜಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸುವುದಕ್ಕೆ ಮುನ್ನ ಸ್ವಾರಸ್ಯಕರ ಘಟನೆಯೊಂದು ನಡೆದಿತ್ತು. ಜನವರಿ 25ರ ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಫೋನ್‌ ಮಾಡಿ ಪ್ರಣಬ್‌ ಅವರ ಅನುಮೋದನೆ ಕೇಳಿದ್ದರು. ಆದರೆ, ಆ ಸಂಗತಿಯನ್ನು ತಮ್ಮ ಮಗಳು ಶರ್ಮಿಷ್ಠಾ ಬಳಿಯೂ ಪ್ರಣಬ್‌ ಹೇಳಿಕೊಂಡಿರಲಿಲ್ಲ.