ನಕಲಿ ಮತದಾನದ ಬಗ್ಗೆ ಸಂಸದ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಪ್ರತಾಪ್ ಮಾಡಿರುವ ಟ್ವೀಟ್ ಹೊಸ ಚರ್ಚೆ ಹುಟ್ಟುಹಾಕಿದೆ.
ಮೈಸೂರು[ಸೆ.1] ಪ್ರಧಾನಿ ನರೇಂದ್ರ ಮೋದಿಯವರೇ, ಮೈಸೂರು ನಗರಪಾಲಿಕೆಗೆ ಚುನಾವಣೆ ಮುಗಿಯಿತು. ಆದರೆ ನಕಲಿ ಮತದಾನ ತಡೆಯಲು ನಮ್ಮಿಂದ ಸಾಧ್ಯವಾಗಿಲ್ಲ. ಹಿಂದುಗಳ ಕುಟುಂಬದ ಹೆಸರಿನಲ್ಲಿ 15-20 ನಕಲಿ ಮತದಾರರಿದ್ದಾರೆ ಎಂಬ ವಿಚಾರವನ್ನು ಪ್ರತಾಪ್ ಎತ್ತಿಕೊಂಡಿದ್ದಾರೆ.
ಮತದಾರರ ಗುರುತು ಚೀಟಿ ಇರುವ ವಿಳಾಸಕ್ಕೆ ಹೋಗಿ ಪರಿಶೀಲಿಸಿದರೆ ಖಾಲಿ ಸೈಟ್ ಕಾಣಿಸುತ್ತದೆ. 2-3 ಸದಸ್ಯರಿರುವ ಹಿಂದೂಗಳ ಮನೆಗಳ ವಿಳಾಸದಲ್ಲಿ 15-20 ಮುಸ್ಲಿಂ ಮತದಾರರ ಹೆಸರಿದೆ. ಇನ್ನು ಮುಂದೆ ನಕಲಿ ಮತದಾನ ತಡೆಯಲು ದಯವಿಟ್ಟು ವೋಟರ್ ಐಡಿಯನ್ನು ಆಧಾರ್ ಕಾರ್ಡ್ ಜತೆ ಲಿಂಕ್ ಮಾಡಬೇಕು ಎಂದು ಪ್ರತಾಪ್ ಮನವಿ ಮಾಡಿಕೊಂಡಿದ್ದಾರೆ.
