ಮತ್ತೊಂದು ದಾಖಲೆಗೆ ಆಧಾರ್ ಲಿಂಕ್ ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 28, Aug 2018, 1:00 PM IST
Link Aadhaar With Voter ID
Highlights

ಮೊಬೈಲ್ ಸಂಖ್ಯೆ, ಪಾನ್ ಕಾರ್ಡ್ ಎಲ್ಲದಕ್ಕೂ ಆಧಾರ್ ಲಿಂಕ್ ಮಾಡುವ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ದಾಖಲೆಗೆ ಆಧಾರ್ ಲಿಂಕ್ ಮಾಡುವ ಬಗ್ಗೆ ಚರ್ಚೆ ಆರಂಭವಾಗಿದೆ. ಚುನಾವಣೆ ವೇಳೆ ಮತಹಾಕಲು ಬಳಸುವ ಗುರುತಿನ ಚೀಟಿಗೂ ಆಧಾರ್ ಲಿಂಕ್ ಮಾಡಬೇಕು ಎಂಬ ಸಲಹೆ ಕೇಳಿಬಂದಿದೆ. 

ನವದೆಹಲಿ: ವಿವಿಧ ಸೇವೆಗಳು ಮತ್ತು ಯೋಜನೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ವಿಷಯ ದೇಶಾದ್ಯಂತ ಗದ್ದಲಕ್ಕೆ ಕಾರಣವಾಗಿರುವ ಹೊತ್ತಿನಲ್ಲೇ, ಚುನಾವಣೆ ವೇಳೆ ಮತಹಾಕಲು ಬಳಸುವ ಗುರುತಿನ ಚೀಟಿಗೂ ಆಧಾರ್ ಲಿಂಕ್ ಮಾಡಬೇಕು ಎಂಬ ಸಲಹೆ
ಕೇಳಿಬಂದಿದೆ. 

ಸೋಮವಾರ ಇಲ್ಲಿ ಚುನಾವಣಾ ಆಯೋಗ ರಾಷ್ಟ್ರೀಯ ಮತ್ತು ಸ್ಥಳೀಯ ಪಕ್ಷಗಳೊಂದಿಗೆ ಹಮ್ಮಿಕೊಂಡಿದ್ದ ಚರ್ಚೆ ವೇಳೆ, ಹಲವು ರಾಜಕೀಯ ಪಕ್ಷಗಳು ಈ ಸಲಹೆ ನೀಡಿವೆ. ಮತದಾರರ ಪಟ್ಟಿಯಲ್ಲಿನ ನಕಲಿ ಹೆಸರುಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಮತಚೀಟಿ ಜೊತೆಗೆ ಆಧಾರ್ ಸಂಖ್ಯೆ ಜೋಡಿಸಬೇಕು ಎಂದು ಹಲವು ಪಕ್ಷಗಳು ಆಯೋಗಕ್ಕೆ ಸಲಹೆ ನೀಡಿವೆ. 

ಈ ಹಿಂದೆ ಚುನಾವಣಾ ಆಯೋಗ ಇಂಥದ್ದೇ ಪ್ರಸ್ತಾಪ ಇಟ್ಟಿತ್ತಾದರೂ, ಅದಕ್ಕೆ 2015 ರಲ್ಲಿ ಸುಪ್ರೀಂಕೋರ್ಟ್ ಬ್ರೇಕ್ ಹಾಕಿತ್ತು.

loader