ಲಿಂಗಾಯತ ಪ್ರತ್ಯೇಕ ಧರ್ಮ ಕುರುಬ, ಮುಸ್ಲಿಮರಿಗೆ ಬೇಕು

news | Wednesday, April 11th, 2018
Suvarna Web Desk
Highlights

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ಬೇಕು ಹಾಗೂ ಅಲ್ಪಸಂಖ್ಯಾತ ಮಾನ್ಯತೆ ದೊರಕಬೇಕು. ಹೀಗಂತ ಬಯಸುವವರ ಸಂಖ್ಯೆ ಲಿಂಗಾಯತ ಸಮುದಾಯಕ್ಕಿಂತ ಮುಸ್ಲಿಂ ಹಾಗೂ ಕುರುಬ ಸಮುದಾಯದಲ್ಲಿ ಹೆಚ್ಚಿದೆ!

ಬೆಂಗಳೂರು : ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ಬೇಕು ಹಾಗೂ ಅಲ್ಪಸಂಖ್ಯಾತ ಮಾನ್ಯತೆ ದೊರಕಬೇಕು. ಹೀಗಂತ ಬಯಸುವವರ ಸಂಖ್ಯೆ ಲಿಂಗಾಯತ ಸಮುದಾಯಕ್ಕಿಂತ ಮುಸ್ಲಿಂ ಹಾಗೂ ಕುರುಬ ಸಮುದಾಯದಲ್ಲಿ ಹೆಚ್ಚಿದೆ!

ರಾಜ್ಯ ಸರ್ಕಾರವು ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಗುರುತಿಸಲು ಹಾಗೂ ಆ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ ಬೆನ್ನ ಹಿಂದೆಯೇ ಲಿಂಗಾಯತ ಧರ್ಮ ಪ್ರತ್ಯೇಕತೆ ನಿಜವಾಗಿಯೂ ಬೇಕಿತ್ತಾ? ಇದಕ್ಕೆ ಬೇಡಿಕೆ ಇಟ್ಟವರಾರ‍ಯರು? ಲಿಂಗಾಯತರು ಪ್ರತ್ಯೇಕ ಧರ್ಮದ ಪರವಾಗಿದ್ದಾರಾ? ಇದೊಂದು ರಾಜಕೀಯ ದಾಳವಾ? ಎಂಬಿತ್ಯಾದಿ ಪ್ರಶ್ನೆಗಳ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಇದಕ್ಕೆ ಉತ್ತರ ಕಂಡುಕೊಳ್ಳಲು ‘ಸುವರ್ಣ ನ್ಯೂಸ್‌, ಕನ್ನಡಪ್ರಭ ಮತ್ತು ಎಝಡ್‌ ಸಂಶೋಧನಾ ಸಂಸ್ಥೆ’ ರಾಜ್ಯಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಈ ಕುತೂಹಲಕಾರಿ ಸಂಗತಿ ಬಹಿರಂಗವಾಗಿದೆ.

ಲಿಂಗಾಯತ ಧರ್ಮದ ಬಗ್ಗೆ ಲಿಂಗಾಯತರಿಗಿಂತ ಕುರುಬ ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ. ಇಂತಹ ಒಲವು ವ್ಯಕ್ತಪಡಿಸಲು ಈ ಸಮುದಾಯದವರು ನೀಡಿರುವ ಕಾರಣ- ಲಿಂಗಾಯತ ಪ್ರತ್ಯೇಕ ಧರ್ಮವಾಗುವುದರಿಂದ ಹಾಲಿ ಸರ್ಕಾರ ಸುಭದ್ರವಾಗುತ್ತದೆ ಎಂಬುದು.

ಈ ಸಮೀಕ್ಷೆಯ ಪ್ರಕಾರ ರಾಜ್ಯದ ಒಟ್ಟಾರೆ ವೀರಶೈವ ಲಿಂಗಾಯತ ಸಮುದಾಯದಲ್ಲಿ ಲಿಂಗಾಯತ ಧರ್ಮ ಬೇಕು ಎನ್ನುವವರ ಸಂಖ್ಯೆ ಶೇ.30ರಷ್ಟಿದ್ದರೆ, ಶೇ.63ರಷ್ಟುಮಂದಿ ಲಿಂಗಾಯತ ಧರ್ಮ ಬೇಡ ಎನ್ನುತ್ತಾರೆ ಮತ್ತು ಉಳಿದವರು ಗೊತ್ತಿಲ್ಲ ಎಂದು ಹೇಳುತ್ತಾರೆ. ಆದರೆ, ಕುರುಬ ಸಮುದಾಯದಲ್ಲಿ ಶೇ.47ರಷ್ಟುಮಂದಿ ಲಿಂಗಾಯತ ಧರ್ಮ ಬೇಕು ಎನ್ನುತ್ತಾರೆ ಮತ್ತು ಈ ಸಂಖ್ಯೆ ಮುಸ್ಲಿಮರಲ್ಲಿ ಶೇ.44ರಷ್ಟುಇದೆ.

ಕುರುಬ ಸಮುದಾಯದಲ್ಲಿ ಲಿಂಗಾಯತವು ಪ್ರತ್ಯೇಕ ಧರ್ಮವಾಗಲೇಬೇಕು ಎಂದು ಗಟ್ಟಿನಿಲುವು ಹೊಂದಿರುವವರ ಸಂಖ್ಯೆ ಶೇ.23ರಷ್ಟುಇದ್ದರೆ, ಆದರೆ ಆಗಲಿ ಎನ್ನುವವರು 24ರಷ್ಟುಮಂದಿ. ಉಳಿದ ಶೇ.45ರಷ್ಟುಮಂದಿ ಪ್ರತ್ಯೇಕ ಧರ್ಮ ಬೇಡ ಎನ್ನುತ್ತಾರೆ ಹಾಗೂ ಶೇ.7ರಷ್ಟುಮಂದಿ ಈ ಬಗ್ಗೆ ಏನೂ ಗೊತ್ತಿಲ್ಲ ಎನ್ನುತ್ತಾರೆ. ಮುಸ್ಲಿಮರಲ್ಲಿ ಪ್ರತ್ಯೇಕ ಧರ್ಮದ ಬಗ್ಗೆ ಗಟ್ಟಿನಿಲುವು ಹೊಂದಿರುವರು ಶೇ.27 ಆಗಿದ್ದರೆ, ಆದರೆ ಆಗಲಿ ಎನ್ನುವವರು ಶೇ.17 ಮತ್ತು ಬೇಡ ಎನ್ನುವವರು 44ರಷ್ಟುಮಂದಿ. ಗೊತ್ತಿಲ್ಲ ಎನ್ನುವವರು ಶೇ.11ರಷ್ಟುಮಂದಿಯಿದ್ದಾರೆ.

ರಾಜ್ಯದಲ್ಲಿ ಕುರುಬರನ್ನು ಹೊರತುಪಡಿಸಿ ಇತರೆ ಹಿಂದುಳಿದ ವರ್ಗದಲ್ಲಿ ಲಿಂಗಾಯತ ಧರ್ಮಕ್ಕೆ ಅಂತಹ ಒಲವಿಲ್ಲ. ಸಮೀಕ್ಷೆ ಪ್ರಕಾರ ಈ ಸಮುದಾಯದಲ್ಲಿ ಶೇ.33 ಮಂದಿ ಲಿಂಗಾಯತ ಧರ್ಮದ ಪರವಿದ್ದರೆ, ಅದರಲ್ಲಿ ಶೇ.12ರಷ್ಟುಮಂದಿ ಮಾತ್ರ ಪ್ರತ್ಯೇಕ ಧರ್ಮವಾಗಲೇಬೇಕು ಎಂಬ ಗಟ್ಟಿನಿಲುವು ಹೊಂದಿದ್ದಾರೆ. ಶೇ.21ರಷ್ಟುಮಂದಿ ಆದರೆ ಆಗಬಹುದು ಎಂದು ಹೇಳುತ್ತಾರೆ.

ಇನ್ನು ಪ್ರತ್ಯೇಕ ಧರ್ಮದ ಕೂಗು ಹೆಚ್ಚಾಗಿ ಕೇಳಿ ಬಂದ ಹೈದ್ರಾಬಾದ್‌ ಕರ್ನಾಟಕದಲ್ಲೂ ಲಿಂಗಾಯತರಿಗಿಂತ ಕುರುಬ ಮತ್ತು ಮುಸ್ಲಿಂ ಸಮುದಾಯದವರೇ ಪ್ರತ್ಯೇಕ ಧರ್ಮದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಈ ಭಾಗದಲ್ಲಿ ಶೇ.39ರಷ್ಟುಮಂದಿ ಲಿಂಗಾಯತರು ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆ ಬಗ್ಗೆ ಒಲವು ತೋರಿದರೆ, ಕುರುಬರು ಶೇ.52ರಷ್ಟುಮತ್ತು ಶೇ.60ರಷ್ಟುಮುಸ್ಲಿಂ ಸಮುದಾಯದವರು ಪ್ರತ್ಯೇಕ ಧರ್ಮದ ಆಶಯ ವಕ್ತಪಡಿಸುತ್ತಾರೆ.

ಸುವರ್ಣನ್ಯೂಸ್‌ ಮತ್ತು ಕನ್ನಡಪ್ರಭ-ಎಝಡ್‌ ಸಂಶೋಧನಾ ಸಂಸ್ಥೆ ರಾಜ್ಯವನ್ನು ಆರು ಪ್ರದೇಶಗಳಾಗಿ ವಿಂಗಡಿಸಿ, ಪ್ರತಿ ಪ್ರದೇಶದಲ್ಲೂ ವಿವಿಧ ಜಾತಿಗಳು ಈ ವಿಚಾರದ ಬಗ್ಗೆ ಹೊಂದಿರುವ ಅಭಿಪ್ರಾಯದ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಈ ಕುತೂಹಲಕಾರಿ ಸಂಗತಿ ವ್ಯಕ್ತವಾಗಿದೆ.

 

ಸಮೀಕ್ಷೆ ಏನು ಹೇಳಿದರೂ ಲಿಂಗಾಯತ ಸಮುದಾಯದಲ್ಲಿನ ಬಡವರ, ಅನ್ಯಾಯಕ್ಕೊಳಗಾದವರ ಪರ ಹೋರಾಟ ನಡೆಸಿ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಲಾಗಿದೆ. ಜನಾಭಿಪ್ರಾಯಗಳನ್ನು ಸಂಗ್ರಹಿಸಿಯೇ ಮುಂದಿನ ಹೆಜ್ಜೆ ಇಡಲಾಗಿತ್ತು. ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿರುವುದು ಅವರವರ ವೈಯಕ್ತಿಕ. ಸಮುದಾಯದವರ ವಿರುದ್ಧ ಯಾವುದೇ ತೀರ್ಮಾನ ಕೈಗೊಂಡಿಲ್ಲ.

- ಬಸವರಾಜ್‌ ಹೊರಟ್ಟಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ

 

ಕೆಲವರು ಸ್ವಾರ್ಥಕ್ಕಾಗಿ ಸದ್ಯಕ್ಕೆ ಒಪ್ಪಿದರೂ ಹೃದಯಾಂತರಾಳದಲ್ಲಿ ಹಳೆಯ ಪರಂಪರೆಯಿಂದ ಹೊರಬರಲು ಇಷ್ಟಪಡುವುದಿಲ್ಲ. ಲಿಂಗಾಯತ ಸಮುದಾಯದಲ್ಲಿನ ಸಣ್ಣ ಸಣ್ಣ ಜಾತಿಗಳಿಗೆ ಈವರೆಗೂ ಮೂಲ ಸೌಲಭ್ಯಗಳು ಸಿಕ್ಕಿಲ್ಲ. ಅಂತಹ ಜಾತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಮೇಲಕ್ಕೆ ತರಬೇಕು. ಈಗಿನ ಸ್ಥಿತಿ ಚರ್ಚೆ ನಡೆಸುವುದಕ್ಕಿಂತ ಮುಂದಿನ 50 ವರ್ಷದಲ್ಲಿ ಇದು ಏನಾಗಲಿದೆ ಎಂಬುದರ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಬೇಕಾದ ಅಗತ್ಯ ಇದೆ.

- ಡಾ

ವಾಮನಾಚಾರ್ಯ, ಬಿಜೆಪಿ ವಕ್ತಾರ

 

ಪ್ರತ್ಯೇಕ ಧರ್ಮ ಲಿಂಗಾಯತರಿಗೇ ಬೇಕಿಲ್ಲ!

- (ಹೊಸ ಸಂಗತಿ) ಕನ್ನಡಪ್ರಭ-ಸುವರ್ಣ ನ್ಯೂಸ್‌-ಎಝಡ್‌ ರೀಸಚ್‌ರ್‍ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿಯ ವಿವರ ಬಹಿರಂಗ

- ಬೇಕೆಂದವರಲ್ಲಿ ಲಿಂಗಾಯತರಿಗಿಂತ ಕುರುಬ, ಮುಸ್ಲಿಮರೇ ಹೆಚ್ಚು

ಲಿಂಗಾಯತ ಪ್ರಾಬಲ್ಯವಿರುವ ಮುಂಬೈ ಕರ್ನಾಟಕದಲ್ಲೇ ಅತಿ ಕಡಿಮೆ ಒಲವು

ಯಾವ ಸಮುದಾಯ ಏನನ್ನುತ್ತೆ?

ಸಮುದಾಯ ಗೊತ್ತಿಲ್ಲ ಬೇಡ ಆದರೆ ಆಗಲಿ ಬೇಕೇ ಬೇಕು

ಲಿಂಗಾಯತ 07% 63% 17% 13%

ಕುರುಬ 07% 45% 24% 23%

ಮುಸ್ಲಿಂ 11% 44% 17% 27%

ಒಕ್ಕಲಿಗ 08% 59% 19% 13%

ಎಸ್ಸಿ-ಎಸ್ಟಿ 11% 58% 17% 14%

ಒಬಿಸಿ 11% 56% 21% 12%

ಇತರೆ 08% 51% 25% 16%

 

ಪ್ರತ್ಯೇಕ ಧರ್ಮ ಬೇಡಿಕೆ:

ಯಾವ ಭಾಗದಲ್ಲಿ ಎಷ್ಟು?

ಮುಂಬೈ ಕರ್ನಾಟಕ ಶೇ.16

ಕರಾವಳಿ ಕರ್ನಾಟಕ ಶೇ.35

ಹಳೆ ಮೈಸೂರು ಶೇ.37

ಬೆಂಗಳೂರು ನಗರ ಶೇ.40

ಹೈದ್ರಾಬಾದ್‌ ಕರ್ನಾಟಕ ಶೇ.47

ಮಧ್ಯ ಕರ್ನಾಟಕ ಶೇ.48

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk