ಬೆಳಗಾವಿ (ನ.25):  ಶಾಸಕ ಬಾಲಚಂದ್ರ ಜಾರಕಿಹೊಳಿಯಿಂದ  ಪ್ರಾಣಾಪಾಯವಿರುವ ಹಿನ್ನೆಲೆಯಲ್ಲಿ , ಸರ್ಕಾರ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಕುಟುಂಬವೊಂದು  ಅಧಿವೇಶನ ನಡೆಯುತ್ತಿರುವ ಸುವರ್ಣ ಸೌಧದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ವಿಧಾನಸಭಾ ಚುಣಾವಣಾ ಸಂದರ್ಭದಲ್ಲಿ ಅಕ್ರಮ ಮದ್ಯ ಸಂಗ್ರಹದ ಬಗ್ಗೆ  ಮಾಹಿತಿ ನೀಡಿದಕ್ಕೆ  ಶಾಸಕ ಬಾಲಚಂದ್ರ ಜಾರಕಿಹೊಳಿ  ಹಾಗೂ ಅವರ ಸಂಬಂಧಿಕರು ನನ್ನ ಸಹೋದರನನ್ನು ಕೊಲೆ ಮಾಡಿದ್ದಾರೆ. ನನ್ನ ಮೇಲೆ ಮಾರಣಾಂತಿಕ  ಹಲ್ಲೆ ಮಾಡಿದ್ದಾರೆ. ಮೂರು ವರ್ಷದಿಂದ  ನನ್ನನ್ನು  ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಕೊಡಿ, ಪ್ರಕರಣದ ಬಗ್ಗೆ  ಸಿಐಡಿ ತನಿಖೆ ನಡೆಸಿ, ಇಲ್ಲ ನಮ್ಮ ಕುಟುಂಬಕ್ಕೆ ದಯಾಮರಣ ನೀಡಿ ಎಂದು  ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಕೆಮ್ಮನಕೋಲ ಗ್ರಾಮದ ಮಲ್ಲಿಕಾರ್ಜುನ  ಗಾಣಿಗಿ ಕುಟುಂಬ ಬೆಳಗಾವಿಯ ಸುವರ್ಣ  ಸೌಧ ಮುಂಭಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಸಂಬಂಧಿಕರು ನಡೆಸಿದ ದೌರ್ಜನ್ಯದ ಫೋಟೋಗಳನ್ನು ಪ್ರದರ್ಶನ ಮಾಡಿ ಆಳಲು ತೋಡಿಕೊಂಡಿದ್ದಾರೆ. ಇನ್ನೂ ಕೊಲಗೋಡು ಠಾಣೆ ಪೊಲೀಸರು ಶಾಸಕ ಬಾಲಚಂದ್ರ ಜಾರಕಿಹೊಳಿಗೆ  ಹೆದರಿ ಮೌನವಾಗಿದ್ದು  ಕೊಲೆ ಆರೋಪಿಗಳನ್ನು ಬಂಧಿಸುತ್ತಿಲ್ಲ. ಇದರ ಬದಾಲಗಿ ಮದ್ಯ ಸಂಗ್ರಹದ ಬಗ್ಗೆ  ಮಾಹಿತಿ ನೀಡಿದಕ್ಕೆ ನನಗೆ ೪ ಲಕ್ಷ ದಂಡ ಹಾಕಿ ವಸೂಲಿ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಗಾಣಗಿ ಆರೋಪಿಸಿದ್ದಾರೆ.