ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಗೋ ಸಂರಕ್ಷಣೆ ವಿರುದ್ಧ ಸಿಎಂ ಆದಿತ್ಯನಾಥ್ ಸಮರ ಸಾರಿದ್ದಾರೆ. ಆದರೆ, ಇತ್ತ ಬಿಜೆಪಿ ಆಡಳಿತದ ಇನ್ನೊಂದು ರಾಜ್ಯ ಗುಜರಾತ್ ಗೋ ಸಂರಕ್ಷಣೆ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಗೋಹತ್ಯೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾಯ್ದೆಗೆ ವಿಧಾನಸಭೆ ಅನುಮೋದನೆ ನೀಡಿದೆ.
ಅಹಮದಾಬಾದ್(ಎ.01): ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಗೋ ಸಂರಕ್ಷಣೆ ವಿರುದ್ಧ ಸಿಎಂ ಆದಿತ್ಯನಾಥ್ ಸಮರ ಸಾರಿದ್ದಾರೆ. ಆದರೆ, ಇತ್ತ ಬಿಜೆಪಿ ಆಡಳಿತದ ಇನ್ನೊಂದು ರಾಜ್ಯ ಗುಜರಾತ್ ಗೋ ಸಂರಕ್ಷಣೆ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಗೋಹತ್ಯೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾಯ್ದೆಗೆ ವಿಧಾನಸಭೆ ಅನುಮೋದನೆ ನೀಡಿದೆ.
ನಿನ್ನೆ ನಡೆದ ಗುಜರಾತ್ ವಿಧಾನಸಭಾ ಕಲಾಪದಲ್ಲಿ ಗೋಹತ್ಯೆ ತಿದ್ದುಪಡಿ ಕಾಯ್ದೆಗೆ ಅನುಮೋದನೆ ಸಿಕ್ಕಿದೆ. 1954ರ ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ 2011ರಿಂದ ಗುಜರಾತ್'ನಲ್ಲಿ ಗೋಹತ್ಯೆ, ಅಕ್ರಮ ಸಾಗಣೆ ಮತ್ತು ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಇದೀಗ ಇದೇ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು. ಗೋಹತ್ಯೆ ಮಾಡಿದವರಿಗೆ 7-10 ವರ್ಷ ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ಅಂಶ ಈ ಕಾಯ್ದೆ ಹೊಂದಿದೆ.
ಈ ಮೂಲಕ ಗೋ ಹಂತಕರಿಗೆ ಜೀವಾವಧಿ ಶಿಕ್ಷೆ ಕಾನೂನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಗುಜರಾತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
