ಅಪಹರಣಕಾರರು ಹತ್ಯೆಗೀಡಾದ ಸರ್ವಾಧಿಕಾರಿ ಗಡಾಫಿ ಬೆಂಬಲಿಗರು ಎಂದು ಹೇಳಿಕೊಂಡಿದ್ದು, ಕೈಯಲ್ಲಿ ಗ್ರನೇಡ್ ಹಿಡಿದು ತಮ್ಮ ಬೇಡಿಕೆ ಈಡೇರಿಸದಿದ್ದರೆ ಸ್ಫೋಟಿಸುವ ಬೆದರಿಕೆ ಒಡ್ಡಿದ್ದರು. ಆದರೆ, ಅಪಹೃತರು ಇಟ್ಟಿದ್ದ ಬೇಡಿಕೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಟ್ರಿಪೋಲಿ(ಡಿ.23): ಲಿಬಿಯಾ ವಿಮಾನ ಹೈಜಾಕ್ ಪ್ರಕರಣ ಸುಖಾಂತ್ಯ ಕಂಡಿದೆ. ಆಂತರಿಕ ವಿಮಾನವನ್ನ ಅಪಹರಿಸಿದ್ದ ಆಗಂತುಕರು ಮಾಲ್ಟಾ ದ್ವೀಪದಲ್ಲಿ ಲ್ಯಾಂಡ್ ಮಾಡಿದ್ದರು. ಇದೀಗ, ವಿಮಾನವನ್ನ ಅಪಹರಿಸಿದ್ದ ಇಬ್ಬರೂ ಶರಣಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಅಪಹರಣಕಾರರು ಹತ್ಯೆಗೀಡಾದ ಸರ್ವಾಧಿಕಾರಿ ಗಡಾಫಿ ಬೆಂಬಲಿಗರು ಎಂದು ಹೇಳಿಕೊಂಡಿದ್ದು, ಕೈಯಲ್ಲಿ ಗ್ರನೇಡ್ ಹಿಡಿದು ತಮ್ಮ ಬೇಡಿಕೆ ಈಡೇರಿಸದಿದ್ದರೆ ಸ್ಫೋಟಿಸುವ ಬೆದರಿಕೆ ಒಡ್ಡಿದ್ದರು. ಆದರೆ, ಅಪಹೃತರು ಇಟ್ಟಿದ್ದ ಬೇಡಿಕೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಮೊದಲಿಗೆ 111 ಪ್ರಯಾಣಿಕರನ್ನ ಬಿಡುಗಡೆ ಮಾಡಿ, ವಿಮಾನ ಸಿಬ್ಬಂದಿಯನ್ನ ಒತ್ತೆಯಾಳಾಗಿರಿಸಿಕೊಂಡಿದ್ದ ಅಗಂತುಕರು, ಬಳಿಕ ಶರಣಾಗಿದ್ದಾರೆ ಎನ್ನಲಾಗಿದೆ.