ಶ್ರೀರಂಗಟಪ್ಟಣ (ಸೆ.17): ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ಸ್ಥಾಪಿಸಿರುವ ದ್ವಿ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಯು. ಉದಯ್ ಲಲಿತ್ ಅವರನ್ನು ಬೇರೆ ಪೀಠಕ್ಕೆ ವರ್ಗಾಹಿಸಬೇಕು ಎಂದು ಪಟ್ಟಣದ ವಕೀಲರು ಶನಿವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ. ಠಾಕೂರ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ನ್ಯಾ. ಯು. ಉದಯ್ ಲಲಿತ್ 2013ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಪರ 2 ಪ್ರಕರಣದಲ್ಲಿ ವಕಾಲತ್ತು ವಹಿಸಿದ್ದರು. ಅಂತಹವರು ಈಗ ಕಾವೇರಿ ನದಿ ನೀರು ಹಂಚಿಕೆ ವ್ಯಾಜ್ಯದ ನ್ಯಾಯಪೀಠಕ್ಕೆ ಸದಸ್ಯರಾಗಿದ್ದಾರೆ. ಸದರಿ ವ್ಯಾಜ್ಯದ ವಿಚಾರಣೆ ನಡೆಸಿ ತೀರ್ಪನ್ನು ನೀಡಿದ್ದಾರೆ. ಜನರಲ್ಲಿ ನ್ಯಾಯಾಂಗದ ಬಗ್ಗೆ ನಂಬಿಕೆ ಉಳಿಯಬೇಕಾದರೆ ನ್ಯಾಯಾಮೂರ್ತಿಗಳಾದ ಯು. ಉದಯ್ ಲಲಿತ್ ಅವರನ್ನು ಬೇರೆ ಪೀಠಕ್ಕೆ ವರ್ಗಾಹಿಸಬೇಕು ಎಂದು ಮನವಿ ಸಲ್ಲಿಸಿದರು.
ವಕೀಲರು ಯು. ಉದಯ್ ಲಲಿತ್ ಅವರಿಗೂ ಪತ್ರ ಬರೆದಿದ್ದು ಕಾವೇರಿ ತಾವು ಈ ಪ್ರಕರಣದ ಕಾವೇರಿ ನದಿ ನೀರು ಹಂಚಿಕೆ ಪೀಠದಿಂದ ಹಿಂದೆ ಸರಿಯಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಮರೀಗೌಡ, ನಾರಾಯಣಸ್ವಾಮಿ ಅಂಚೆ ಮೂಲಕ ಮೂಲಕ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ರವಾನಿಸಿದ್ದಾರೆ.
