ಶಾಂತಿವನದಿಂದ ಸಿದ್ದು ಸಿಎಂ ಎಚ್‌ಡಿಕೆಗೆ ಬರೆದ ಎರಡೆರಡು ಪತ್ರದಲ್ಲಿ ಏನಿದೆ?

First Published 30, Jun 2018, 12:43 PM IST
Letter Politics: Former CM Siddaramaiah writes Two letter to Chief minister H.D.Kumaraswamy
Highlights

ಒಂದೆಡೆ ಪ್ರತ್ಯೇಕ ಬಜೆಜ್ ಬೇಕೋ ಬೇಡವೋ ಎಂಬ ಚರ್ಚೆ ಮುಂದುವರಿದಿದ್ದರೆ ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಸಮರ ಆರಂಭಿಸಿದ್ದಾರೆ. ಏನಿದು ಸುದ್ದಿ ...ಮುಂದೆ  ಓದಿ.

ಬಾಗಲಕೋಟೆ[ಜೂ.30] ಬದಾಮಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ಸಿದ್ದರಾಮಯ್ಯ ಕುಮಾರಸ್ವಾಮಿಗೆ ಪತ್ರದ ಮೇಲೆ ಪತ್ರ ಬರೆದಿದ್ದಾರೆ. ಬಾದಾಮಿ ಕ್ಷೇತ್ರದ ಜನರ ಬೇಡಿಕೆ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಪತ್ರ ರವಾನಿಸಿರುವ ಸಿದ್ದರಾಮಯ್ಯ ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟಿದ್ದು ಅಧಿಕಾರಿಗಳ ಸಭೆ ಕರೆಯಲು ಒತ್ತಾಯಿಸಿದ್ದರು.

ಇದಾದ ಮೇಲೆ ಮತ್ತೊಂದು ಪತ್ರ ಬರೆದಿದ್ದು ಗುಳೇದಗುಡ್ಡ ಭಾಗದಲ್ಲಿ ಪರ್ವತಿ ಕೆರೆ,ಗಂಜಿ ಕೆರೆ,ಹಿರೆಕೆರೆಗಳಿಗೆ ನೀರು ತುಂಬಿಸಬೇಕು ಎಂದು ಕೋರಿದ್ದಾರೆ. 12 ಕೋಟಿ ರೂ. ವೆಚ್ಚದ ಅಂದಾಜು ಪ್ರತಿ ಲಗತ್ತಿಸಿ ಸಿಎಂ ಕುಮಾರಸ್ವಾಮಿ ಗೆ ಪತ್ರ ಬರೆದಿದ್ದಾರೆ.

ಶಾಂತಿವನದಿಂದಲೇ ಪತ್ರ: ಧರ್ಮಸ್ಥಳದ ಶಾಂತಿವನದಲ್ಲಿದ್ದಾಗಲೆ ಅಂದರೆ ಜೂನ್ 20 ,ಹಾಗೂ 25 ರಂದು  ಕುಮಾರಸ್ವಾಮಿ ಗೆ ಪತ್ರ ಬರೆದಿದ್ದಾರೆ. ಶಾಂತಿವನದಲ್ಲಿದ್ದಾಗ ಸರಕಾರದ ಆಯಸ್ಸಿನ ಬಗ್ಗೆ ನೀಡಿದ್ದ ಹೇಳಿಕೆಯ ತುಣುಕೊಂದು ಮಾಧ್ಯಮಗಳಲ್ಲಿ ಸುದ್ದಿ ಮಾಡಿತ್ತು.

loader