ಇದನ್ನು ನಾನು ತಪ್ಪು ಅಂತ ಹೇಳಲ್ಲ. ಬಹಿರಂಗವಾಗಿರುವ ಡೈರಿ ಸುಳ್ಳು ಅಂತಲೂ ಹೇಳಲ್ಲ, ಹಾಗಂತ ಅದು ನಿಜವೂ ಅಲ್ಲ., ಎಂದು ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರು (ಫೆ.24): ಡೈರಿಯ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ, ಜಿ. ಪರಮೇಶ್ವರ್. ಸಿಎಂ, ಸಚಿವರು ರಾಜೀನಾಮೆ ‌ಕೊಡ್ಬೇಕು ಎಂದು ಹೇಳ್ತಾ ಇರುವುದು ವಿರೋಧ ಪಕ್ಷವಾದ ಬಿಜೆಪಿಯವರ ಸಹಜವಾದ ನಡೆಯಾಗಿದೆ.

ಇದನ್ನು ನಾನು ತಪ್ಪು ಅಂತ ಹೇಳಲ್ಲ. ಬಹಿರಂಗವಾಗಿರುವ ಡೈರಿ ಸುಳ್ಳು ಅಂತಲೂ ಹೇಳಲ್ಲ, ಹಾಗಂತ ಅದು ನಿಜವೂ ಅಲ್ಲ., ಎಂದು ಪರಮೇಶ್ವರ್ ಹೇಳಿದ್ದಾರೆ.

ಆದರೆ ಈ ಡೈರಿ ಗೋವಿಂದರಾಜ್ ನಿವಾಸದಲ್ಲೇ ಸಿಕ್ಕ ಡೈರಿಯೇ ಎಂಬುವುದನ್ನು ಕೇಂದ್ರ ಸರ್ಕಾರ ಅಥವಾ ಐಟಿ ಇಲಾಖೆಯವರೇ ಬಹಿರಂಗಪಡಿಸಬೇಕಿದೆ, ಇದರಿಂದ ಸತ್ಯಾಂಶ ಹೊರ ಬರಲಿದೆ. ದೇಶದ ಜನತೆಗೆ ಸತ್ಯವನ್ನು ತಿಳಿಸಬೇಕಿದೆ, ಎಂದು ಅವರು ಹೇಳಿದ್ದಾರೆ.