ಜೆಡಿಎಸ್‌ನಲ್ಲಿ ಉಸಿರುಗಟ್ಟುವ ವಾತವರಣವಿದೆ, ಎಂದು ಮತ್ತೆ ಪುನರುಚ್ಛರಿಸಿದ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್, 'ರೇವಣ್ಣ ಮಗ ಪ್ರಜ್ವಲ್ ಕಾಂಗ್ರೆಸ್‌ಗೆ ಸೇರಿಕೊಳ್ಳಲಿ...' ಎಂದಿದ್ದಾರೆ.

ಬೆಂಗಳೂರು: ಜೆಡಿಎಸ್‌ನಲ್ಲಿ ಉಸಿರುಗಟ್ಟುವ ವಾತವರಣವಿದೆ, ಎಂದು ಮತ್ತೆ ಪುನರುಚ್ಛರಿಸಿದ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್, 'ರೇವಣ್ಣ ಮಗ ಪ್ರಜ್ವಲ್ ಕಾಂಗ್ರೆಸ್‌ಗೆ ಸೇರಿಕೊಳ್ಳಲಿ...' ಎಂದಿದ್ದಾರೆ.

ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, 'ಪ್ರಜ್ವಲ್‌ಗೆ ಒಳ್ಳೆಯ ನಾಯಕತ್ವ ಗುಣವಿದೆ. ಜನರೊಂದಿಗೆ ಬೆರೆಯುವಂಥ ಯುವಕ. ಅಂಥವರಿಗೆ ಕುಮಾರಸ್ವಾಮಿ ಟಿಕೆಟ್ ಕೊಡುವುದಿಲ್ಲ. ಆತ ಬೆಳೆಯುವುದು ಕುಮಾರಸ್ವಾಮಿಗೆ ಇಷ್ಟವಿಲ್ಲ. ಚನ್ನಪಟ್ಟಣದಲ್ಲಿ ಅನಿತಕ್ಕನನ್ನು ಬಲಿ ಕೊಟ್ಟರು,' ಎಂದು ಆರೋಪಿಸಿದ್ದಾರೆ.

'ನಾನು ನನ್ನ‌ಹಿಂದಿನ ಹೇಳಿಕೆಗೆ ಈಗಲೂ ಬದ್ಧ. ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳಲಿ, ನಾನು ಅವತ್ತೇ ರುಂಡ ಕತ್ತರಿಸಿಕೊಳ್ತೇನೆ,' ಎಂದು ಶಪಥ ಮಾಡಿದರು.

'ನಡಹಳ್ಳಿ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಹಾಗಂತ ಕಾಂಗ್ರೆಸ್ ನಾಯಕರು ಏನಾದ್ರೂ ಮಾತನಾಡಿದ್ದಾರಾ? ಹೋಗುವವರು ಹೋಗಲಿ ಅಂತ ಬಿಟ್ಟು ಬಿಡಬೇಕು.
ರಾಜಕೀಯದಲ್ಲಿ ಅವೆಲ್ಲ ಸಹಜ. ನಮ್ಮನ್ನೂ ಸುಮ್ಮನೆ ಬಿಟ್ಟುಬಿಡಿ. ನಮ್ಮ‌ಹಣೆ ಬರಹವನ್ನ ದೇವರೇ ಬರೆಯಬೇಕು,' ಎಂದು ಹೇಳಿದರು.