ಬೆಂಗಳೂರಿನಲ್ಲೂ ವಾಯುಮಾಲಿನ್ಯ ಹೆಚ್ಚಾಗಿದೆ. ಶುದ್ದ ಗಾಳಿ, ನೀರು, ಪರಿಸರಕ್ಕೆ ಆದ್ಯತೆ ನೀಡಬೇಕಿದೆ. ಈ ಹಿನ್ನಲೆಯಲ್ಲಿ ಪ್ರತಿ ತಿಂಗಳಲ್ಲಿ ಒಂದು ದಿನ ಬೆಂಗಳೂರಿಗರು ತಮ್ಮ ಪರಿಸರದ ಉಳಿವಿಗಾಗಿ ಸ್ವಂತ ವಾಹನಗಳ ಬಳಕೆಯನ್ನು ಸ್ಥಗಿತಗೊಳಿಸುವಂತೆ ವಿಧಾನಸೌಧದಲ್ಲಿ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಸುದ್ಧಿಗೋಷ್ಟಿಯಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು (ಡಿ.01): ಬೆಂಗಳೂರಿನಲ್ಲೂ ವಾಯುಮಾಲಿನ್ಯ ಹೆಚ್ಚಾಗಿದೆ. ಶುದ್ದ ಗಾಳಿ, ನೀರು, ಪರಿಸರಕ್ಕೆ ಆದ್ಯತೆ ನೀಡಬೇಕಿದೆ. ಈ ಹಿನ್ನಲೆಯಲ್ಲಿ ಪ್ರತಿ ತಿಂಗಳಲ್ಲಿ ಒಂದು ದಿನ ಬೆಂಗಳೂರಿಗರು ತಮ್ಮ ಪರಿಸರದ ಉಳಿವಿಗಾಗಿ ಸ್ವಂತ ವಾಹನಗಳ ಬಳಕೆಯನ್ನು ಸ್ಥಗಿತಗೊಳಿಸುವಂತೆ ವಿಧಾನಸೌಧದಲ್ಲಿ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಸುದ್ಧಿಗೋಷ್ಟಿಯಲ್ಲಿ ಮನವಿ ಮಾಡಿದ್ದಾರೆ.
ಸಾರಿಗೆ ಇಲಾಖೆ ವತಿಯಿಂದ ಪ್ರತಿ ತಿಂಗಳ ಎರಡನೇ ಭಾನುವಾರ ವಿರಳ ಸಂಚಾರ ದಿನ ( ಲೆಸ್ ಟ್ರಾಫಿಕ್ ಡೇ) ಅಭಿಯಾನ ನಡೆಸಲು ಚಿಂತನೆ ನಡೆಸಲಾಗಿದೆ. ಎರಡನೇ ಭಾನುವಾರದಂದು ಸ್ವಂತ ವಾಹನವನ್ನು ಬಳಸದೇ ಸಮೂಹ ಸಾರಿಗೆ ಬಳಸಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಪ್ರತಿ ತಿಂಗಳ 2ನೇ ಭಾನುವಾರ ‘ಲೆಸ್ ಟ್ರಾಫಿಕ್ ಡೇ’ ಅಭಿಯಾನ ನಡೆಸಲು ಚಿಂತನೆ ನಡೆಸಲಾಗಿದೆ. ಸ್ವಂತ ವಾಹನ ಬಳಸದೇ ಸಮೂಹ ಸಾರಿಗೆ ಬಳಸಲು ಮನವಿ ಮಾಡಿದ್ದಾರೆ. ಬಿಎಂಟಿಸಿ, ಹಳದಿ ಬಾಡಿಗೆ ವಾಹನ ಆಟೋಗಳಿಗೆ ನಿರ್ಬಂಧವಿಲ್ಲ ಎಂದು ಹೇಳಿದ್ದಾರೆ.
2018 ರ ಫೆಬ್ರವರಿ 2 ನೇ ಭಾನುವಾರ ವಿರಳ ಸಂಚಾರ ಅಭಿಯಾನಕ್ಕೆ ಚಾಲನೆ ಸಿಗಲಿದೆ.
