ಬೆಂಗಳೂರು(ಮಾ.12): ಇದು ವಿಚಿತ್ರ ಆದ್ರೂ ಸತ್ಯ. ಪ್ರೀತಿ, ಪ್ರೇಮದಪಾಶಕ್ಕೆ ಬಿದ್ದ ಇಬ್ಬರು ಹುಡುಗಿಯರು ಮದುವೆಯಾಗಿ ಮನೆ ಬಿಟ್ಟು ಹೋಗಿದ್ದಾರೆ. ಈ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ.

ಬಿಂದು ಅಲಿಯಾಸ್​ ಮಾಲಿನಿ ಮತ್ತು ವೆರೋಣಿಕಾ ಅಲಿಯಾಸ್​ ವರುಣಾ ಮನೆ ಬಿಟ್ಟ ಯುವತಿಯರು. ಮದ್ವೆಯಾದ ಬಳಿಕ ವೆರೋಣಿಕಾ ವರುಣ ಅಂತ ಹೆಸರು ಬದಲಿಸಿಕೊಂಡಿದ್ದಳು. ಶುಕ್ರವಾರ ಬೆಳಗ್ಗೆ ಚರ್ಚ್​​ಗೆ ಹೋಗುವುದಾಗಿ ಹೊರಟ ಹುಡುಗಿಯರು ವಾಪಾಸ್ ಮನೆಗೆ ಬಂದಿಲ್ಲ. ಈ ಹಿಂದೆ ಕೂಡ ಮದುವೆಯಾಗಿ ಮನೆಯಿಂದ ದೂರವಾಗಲು ಯತ್ನಿಸಿದ್ದರಂತೆ.ಪೊಷಕರು ಮಧ್ಯ ಪ್ರವೇಶದಿಂದ ಇದು ಸಾಧ್ಯವಾಗಿರಲಿಲ್ಲ.

ಶಾಲಾ ದಿನಗಳಿಂದಲೇ ಜೊತೆಯಲ್ಲಿದ್ದ ವರುಣ ಮತ್ತು ಬಿಂದು, ಪೋಷಕರಿಗೆ ಯಾವುದೇ ಅನುಮಾನ ಬರದಂತೆ ನಡೆದುಕೊಂಡಿದ್ದರ. ಆದರೆ, ಬರಬರುತ್ತಾ ವರುಣಾಳಲ್ಲಿ ದೇಹ ಮತ್ತು ಮಾನಸಿಕ ಬದಲಾವಣೆಗಳು ಕಂಡು ಬಂದಿದ್ದವು. ಕ್ರಮೇಣ ಇಬ್ಬರ ನಡುವೆ ಅಶ್ಲೀಲ ಮೆಸೆಜ್​ಗಳು ರವಾನೆಯಾಗುತಿದ್ವು. ಕಳೆದ ನವೆಂಬರ್​ನಲ್ಲಿ ಇಬ್ಬರೂ ತಮಿಳುನಾಡಿನ ಮಧುರೈಗೆ ಓಡಿ ಹೋಗಿ ಅಲ್ಲಿನ ಮಂಗಳಮುಖಿಯರ ರಕ್ಷಣೆ ಪಡೆದಿದ್ದರು. ಈ ವಿಷಯ ಗೊತ್ತಾದ ಮೇಲೆ ಪೋಷಕರು ಮಧುರೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಬಳಿಕ ಇವರಿಬ್ಬರು ಮಧುರೈನ ಕೋರ್ಟಿಗೆ ಶರಣಾಗಿ ಪ್ರೀತಿಸುತ್ತಿರುವುದಾಗಿ ಮತ್ತು ಮದುವೆಯಾಗುವುದಾಗಿಯೂ ಹೇಳಿಕೊಂಡಿದ್ದರು. ನಂತರ ಇಬ್ಬರನ್ನೂ ಮನವೊಲಿಸಿ ಬೆಂಗಳೂರಿಗೆ ಕರೆ ತಂದು ನಿಗಾ ಇಡಲಾಗಿತ್ತು. ಇಷ್ಟಾದರೂ ನಿನ್ನೆ ಬೆಳಗಿನ ಜಾವ ಮತ್ತೆ ಇಬ್ಬರು ವಿವೇಕನಗರದಿಂದ ಪರಾರಿಯಾಗಿದ್ದಾರೆ.