ರಾತ್ರಿಯ ವೇಳೆ ಮೂತ್ರ ವಿಸರ್ಜನೆಗೆಂದು ಮನೆಯ ಒಡತಿ ಮನೀಷಾ ಎಂಬಾಕೆ ಬಾಗಿಲು ತೆರೆದು ಹೊರಗೆ ಹೋಗಿದ್ದಳು. ಈ ವೇಳೆ ಚಿರತೆಯ ಮರಿ ಮನೆಯ ಒಳಕ್ಕೆ ಹೊಕ್ಕಿದೆ.

ನಾಸಿಕ್[ಆ.16]: ಚಿರತೆ ರಾತ್ರಿಯ ವೇಳೆ ಗುಡಿಸಲೊಂದಕ್ಕೆ ಮೆಲ್ಲಗೆ ನುಸುಳಿ ಇಬ್ಬರು ಮಕ್ಕಳ ಮಧ್ಯೆ ಮಲಗಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರಾಜ್ಯದ ನಾಸಿಕ್‌ನ ಇಗತ್ಪುರಿ ತಾಲೂಕಿನ ಧಮಂಗೋಗೊನ್ ಎಂಬ ಗ್ರಾಮದಲ್ಲಿ ಮಂಗಳವಾರ ಇಂಥದ್ದೊಂದು ಪ್ರಸಂಗ ಜರುಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾತ್ರಿಯ ವೇಳೆ ಮೂತ್ರ ವಿಸರ್ಜನೆಗೆಂದು ಮನೆಯ ಒಡತಿ ಮನೀಷಾ ಎಂಬಾಕೆ ಬಾಗಿಲು ತೆರೆದು ಹೊರಗೆ ಹೋಗಿದ್ದಳು. ಈ ವೇಳೆ ಚಿರತೆಯ ಮರಿ ಮನೆಯ ಒಳಕ್ಕೆ ಹೊಕ್ಕಿದೆ. ಬಳಿಕ ಸೊಳ್ಳೆ ಪರದೆಯ ಕೆಳಗೆ ಮಕ್ಕಳ ಜೊತೆ ಬಂದು ಹಾಸಿಗೆಯ ಮೇಲೆ ಬೆಚ್ಚಗೆ ಮಲಗಿದೆ ಇದನ್ನು ಕಂಡ ಮನಿಷಾ ಮೊದಲು ಸಾಕುನಾಯಿ ಮಲಗಿದೆ ಎಂದು ಭಾವಿಸಿದ್ದಳು. ಆದರೆ, ಮತ್ತೊಮ್ಮೆ ನೋಡಿದಾಗ ಅದು ಚಿರತೆ ಎಂದು ಗೊತ್ತಾಗಿ ಹೌಹಾರಿದ್ದಾಳೆ. 

ಬಳಿಕ ಉಪಾಯವಾಗಿ ಮಕ್ಕಳನ್ನು ಅಲ್ಲಿಂದ ಸಾಗಿಸಿದ್ದಾಳೆ. ಕೊನೆಗೆ ಗ್ರಾಮಸ್ಥರನ್ನು ಎಬ್ಬಿಸಿ ಚಿರತೆ ಮರಿ ಬಂದಿರುವ ಸಂಗತಿಯನ್ನು ಹೇಳಿದ್ದಾಳೆ. ಅರಣ್ಯ ಅಧಿಕಾರಿಗಳು ಬಂದು ಚಿರತೆ ಹಿಡಿದೊಯ್ದಿದ್ದಾರೆ.