Asianet Suvarna News Asianet Suvarna News

ಮೋನಾಲಿಸಾ ಥೈರಾಯ್ಡ್ ಸಮಸ್ಯೆಯಿಂದ  ಬಳಲುತ್ತಿದ್ದಳು!

ವಿಶ್ವವಿಖ್ಯಾತ ಮೋನಾಲಿಸಾ ಕಲಾಕೃತಿಯ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮೋನಾಲಿಸಾ ರೋಗವೊಂದರಿಂದ ಬಳಲುತ್ತಿದ್ದರು ಎಂದು ಸಂಶೋಧನೆ ಹೇಳಿದೆ. ಇದಕ್ಕೆ ಭಾರತೀಯ ಮೂಲದ ವಿಜ್ಞಾನಿ ಸಾಕಷ್ಟು ಆಧಾರಗಳನ್ನು ನೀಡಿದ್ದಾರೆ.

 

Leonardo da Vinci Mona Lisa could have been suffering from hypothyroidism
Author
Bengaluru, First Published Sep 30, 2018, 3:19 PM IST
  • Facebook
  • Twitter
  • Whatsapp

ಬೋಸ್ಟನ್(ಸೆ. 30) ಇಟಲಿಯ ಲಿಯನಾರ್ಡೊ ಡ ವಿಂಚಿ ಕಲಾಕೃತಿ ಮೋನಾಲಿಸಾ ಯಾರಿಗೆ ತಾನೆ ಗೊತ್ತಿಲ್ಲ. ಜಗತ್ತಿನಲ್ಲಿಯೇ ಅತಿ ಸುಂದರ ಕಲಾಕೃತಿ ಎಂಬ ಖ್ಯಾತಿಯನ್ನು ಇದು ಪಡೆದುಕೊಂಡಿದೆ.

ಆದರೆ ಭಾರತೀಯ ಮೂಲದ ವಿಜ್ಞಾನಿಯೊಬ್ಬರು ಸಂಶೋಧನೆಯಿಂದ ಹೊಸ ಸುದ್ದಿಯನ್ನು ಹೊರಹಾಕಿದ್ದಾರೆ.  ಡಾ ವಿಂಚಿಯ ಮೋನಾಲಿಸಾ ಹೈಪೋಥೈರ್ಯಾಡಿಸಂ ನಿಂದ ಬಳಲುತ್ತಿದ್ದರು ಎಂದಿದ್ದಾರೆ.

ಅಮೆರಿಕದ ಬ್ರೇಗಂನಲ್ಲಿ ನೆಲೆಸಿರುವ ಭಾರತೀಯ ಮೂಲದ ವಿಜ್ಞಾನಿ ಮನ್ ದೀಪ್ ಆರ್ ಮೆಹ್ರಾ  ಮತ್ತು ಅಮೆರಿಕದ ಆಸ್ಪತ್ರೆಯೊಂದು  ಈ ಚಿತ್ರದ ಮೇಲೆ ಸಂಶೋಧನೆ ಮಾಡಿದೆ. 

ಲೀಸಾ ಘೆರಾರ್ದಿನಿ  ಅಂದರೆ ಮೋನಾಲಿಸಾ  ಹೆಣ್ಣು ಮಕ್ಕಳಿಗೆ ಕಾಡುವ ಹೈಪರ್ ಲೆಪಿಡೀಮಿಯಾದಿಂದ ಬಳಲುತ್ತಿದ್ದರು ಎಂದು ಸಂಶೊಧನೆ ಹೇಳಿದೆ. ಚಿತ್ರವನ್ನು  ಸ್ಥೂಲವಾಗಿ ಅಧ್ಯಯನ ಮಾಡಿರುವ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ. 

ಲೀಸಾ ಘೆರಾರ್ದಿನಿ ಸುಮಾರು 63 ವರ್ಷ ಇದ್ದಾಗ ಈ ಸಮಸ್ಯೆಗೆ ಗುರಿಯಾಗಿರಬಹುದು. ಈ ಸಮಸ್ಯೆ ಕಾಣಿಸಿಕೊಂಡಾಗ ಥೈರಾಯ್ಡ್ ಗ್ರಂಥಿಗಳೂ ನೈಸರ್ಗಿಕವಾಗಿ ಬೇಕಾಗುವವಷ್ಟು ಹಾರ್ಮೋನ್ ಬಿಡುಗಡೆ ಮಾಡುವುದಿಲ್ಲ.

ಈ ಸಂಶೋಧನೆಯ ವಿವರವನ್ನು ಜರ್ನಲ್ ಒಂದರಲ್ಲಿ ಪ್ರಕಟ ಮಾಡಲಾಗಿದ್ದು ಮೋನಾಲಿಸಾಳ ಕೂದಲು, ಹಳದಿ ಚರ್ಮ ಮತ್ತು ಕೊಂಚ ಊದಿದ ಕುತ್ತಿಗೆಯ ಆಧಾರವನ್ನು  ಸಂಶೋಧಕರು ನೀಡಿದ್ದಾರೆ.

Follow Us:
Download App:
  • android
  • ios