ಆ ಮಕ್ಕಳ ದೇಶ ಎಂದ ಮಹಿಳೆಗೆ ಬಿತ್ತು ಕೈ ಕೋಳ

Lebanese Tourist Sentenced to Eight Years in Prison for Facebook Post Against Egypt
Highlights

ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ವೊಂದು 8 ವರ್ಷದ ಜೖಲು ಶಿಕ್ಷೆಯನ್ನು ತಂದಿಟ್ಟಿದೆ. ಈಜಿಫ್ಟ್ ನ್ನು ಅವಾಚ್ಯವಾಗಿ ಬೖದಿದ್ದಕ್ಕೆ ಮಹಿಳೆಯೊಬ್ಬರು ಘೋರ ಶಿಕ್ಷೆಗೆ ಗುರಿಯಾಗಿದ್ದಾರೆ.

 

ಕೈರೋ[ಜೂ.8]  ಲಿಬೇನಾನ್ ನ ಪ್ರವಾಸಿಗರೊಬ್ಬರು ಈಜಿಫ್ಟ್ ನಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ. ಕಳೆದ ತಿಂಗಳ ಅಂತ್ಯದಲ್ಲಿ ಬಂಧನ ವಾಗಿದ್ದ ಮಹಿಳೆಗೆ 8 ವರ್ಷಗಳ ಜೖಲು ಶಿಕ್ಷೆ ನೀಡಲಾಗಿದೆ.

ಈಜಿಫ್ಟ್ ಪ್ರವಾಸದಲ್ಲಿದ್ದ  ಲಿಬೆನಾನ್  ಮೋನಾ ಎಲ್-ಮಹೋತ್ ರನ್ನು ಕೈರೋ  ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.  ಈಜಿಫ್ಟ್ ನ ಎಲ್ಲ ಕಡೆ ಪ್ರವಾಸ ಮಾಡಿದ್ದ ಮಹಿಳೆ  ತನಗಾದ ಕೆಟ್ಟ ಅನುಭವ ಬರೆದುಕೊಳ್ಳುವ ಭರದಲ್ಲಿ ಈಜಿಫ್ಟ್ ನ್ನು ‘son of a bitch country’ ಎಂದು ಕರೆದಿದ್ದಳು. ಫೇಸ್ ಬುಕ್ ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಳು.

ಪ್ರವಾಸ ಮಾಡುವಾಗ ಟ್ಯಾಕ್ಸಿ ಚಾಲಕರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಳು. ಈ ತೀರ್ಮಾನ ಪುನರ್ ಪರಿಶೀಲನೆ ಮಾಡಲು ಮನವಿ ಸಲ್ಲಿಸಲಾಗಿದ. ಆಕೆಯ ಮಾನಸಿಕ ಸ್ಥಿತಿಯೂ ಸರಿ ಇರಲಿಲ್ಲ ಎಂದು ವಕೀಲರು ವಾದ ಮುಂದಿಟ್ಟಿದ್ದಾರೆ.(ಸಾಂದರ್ಭಿಕ ಚಿತ್ರ]

loader