ಗ್ರೂಪಿನಲ್ಲಿ ಅನೇಕ ಮಹಿಳಾ ಸದಸ್ಯರಿದ್ದ ಕಾರಣ ಅವರಿಗೆ ಇರಿಸುಮುರುಸು ಉಂಟಾಗಿದೆ
ಪುತ್ತೂರು(ಆ.09): ಅರಣ್ಯ ಸಚಿವ ರಮಾನಾಥ್ ರೈ ಅವರ ಅಭಿಮಾನಿ ಗ್ರೂಪಿಗೆ ಅಶ್ಲೀಲ ಲಿಂಕ್ ರವಾನೆಯಾಗಿದೆ. ಅನೇಕ ರಾಜಕೀಯ ಮುಖಂಡರಿದ್ದ ವಾಟ್ಸ್'ಆ್ಯಪ್ ಗ್ರೂಪಿಗೆ ಅಶ್ಲೀಲ ಫೋಟೊ ಲಿಂಕ್ ಬಂದಿದೆ. ಗ್ರೂಪಿನಲ್ಲಿ ಅನೇಕ ಮಹಿಳಾ ಸದಸ್ಯರಿದ್ದ ಕಾರಣ ಅವರಿಗೆ ಇರಿಸುಮುರುಸು ಉಂಟಾಗಿದೆ. ಅಶ್ಲೀಲ ಲಿಂಕ್ ಕಳಿಸಿದ್ದು ಪುತ್ತೂರು ಬ್ಲಾಕ್ ಅಧ್ಯಕ್ಷ ಫಜಲ್ ರಹೀಂ ಎನ್ನಲಾಗಿದ್ದು, ಗ್ರೂಪ್ನಲ್ಲಿರುವ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರೆ ಈ ಗ್ರೂಪ್ನಲ್ಲಿ ಸಚಿವ ರಮಾನಾಥ ರೈ ಇಲ್ಲ. ಆದ್ರೆ ಗ್ರೂಪ್ ಹೆಸರು ಮಾತ್ರ ರಮಾನಾಥ ರೈ ಅಭಿಮಾನಿ ಬಳಗ ಅಂತ ಇದೆ.
