ಬಿಜೆಪಿಯಿಂದ ನಿರಂತರವಾಗಿ ತಮಗೆ ಆಫರ್ ಬರುತ್ತಿದೆ ಎಂದು ಕಾಂಗ್ರೆಸ್  ಮುಖಂಡರೋರ್ವರು ಇದೀಗ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. 

ಬೆಳ್ತಂಗ​ಡಿ [ಜು.11] : ಕ್ಷೇತ್ರದ ಜನರ ವಿಶ್ವಾಸಕ್ಕೆ ದ್ರೋಹ ಬಗೆದು ಹಣ, ಅಧಿಕಾರಕ್ಕೋಸ್ಕರ ಪಕ್ಷಾಂತರ ಮಾಡುವುದಿಲ್ಲ. ಅದರ ಕುರಿತು ಗಮನ ಕೊಡುವುದಿಲ್ಲ. ನನ್ನ ಗುರಿಯೇನಿದ್ದರೂ ಕ್ಷೇತ್ರದ ಅಭಿವೃದ್ಧಿ ಮಾತ್ರ ಎಂದು ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಶೃಂಗೇರಿಯ ಕಾಂಗ್ರೆಸ್‌ ಶಾಸಕ ರಾಜೇಗೌಡ ಸ್ಪಷ್ಪಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿಗೆ ಬರುವಂತೆ ನಿರಂತರ ಒತ್ತಡಗಳು, ಕರೆಗಳು ಬರುತ್ತಿದೆ. ಬಿಜೆಪಿಯ ಹಿರಿಯ ನಾಯಕರು ಕರೆ ಮಾಡಿ ಹಣ, ಅಧಿಕಾರ ಸೇರಿದಂತೆ ಎಲ್ಲ ರೀತಿಯ ಆಮಿಷಗಳನ್ನೂ ಹಾಕುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಅದು ಹೆಚ್ಚಾಗಿದೆ. ಆದರೆ ತಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದರು. ಬಿಜೆಪಿಯವರು ಅಧಿಕಾರಕ್ಕಾಗಿ ಯಾವ ಹಂತಕ್ಕೆ ಇಳಿಯಲೂ ಸಿದ್ಧರಾಗುತ್ತಿದ್ದಾರೆ. 

ಕರ್ನಾಟಕ ರಾಜಕೀಯ ಪ್ರಹಸನದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಇದು ಪ್ರಜಾಪ್ರಭುತ್ವವನ್ನು ಅಣಕಿಸುವ ಕಾರ್ಯವಾಗಿದೆ. ಒಮ್ಮೆ ಚುನಾವಣೆಯಲ್ಲಿ ಗೆದ್ದವರು ಅವಧಿ ಮುಗಿಯುವವರೆಗೂ ಆ ಪಕ್ಷದಲ್ಲಿಯೇ ಉಳಿದುಕೊಳ್ಳಬೇಕು. ಅವಧಿ ಮುಗಿದು ಮುಂದಿನ ಚುನಾವಣೆಯ ಸಂದರ್ಭದಲ್ಲಿ ಪಕ್ಷಾಂತರ ಮಾಡುವುದಿದ್ದರೆ ಮಾಡಲಿ ಎಂದರು.