ಮಹಾನಗರ ಪಾಲಿಕೆ ಮೇಯರ್‌ ಸರೀತಾ ಪಾಟೀಲ, ಉಪಮೇಯರ್‌ ಸಂಜಯ ಶಿಂಧೆ, ಶಾಸಕ ಸಂಭಾಜಿ ಪಾಟೀಲ ಸೇರಿದಂತೆ ಪಾಲಿಕೆಯ ಬಹುತೇಕ ಎಂಇಎಸ್ ಸದಸ್ಯರು ಭಾಗಿಯಾಗಿದ್ದರು
ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳೆಲ್ಲ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದರೆ, ಎಂಇಎಸ್ ತನ್ನ ತನ್ನ ಕ್ಯಾತೆ ತೆಗೆದಿದೆ. ಸಂಭಾಜಿ ಮೈದಾನದಲ್ಲಿ ಕಪ್ಪು ಭಾವುಟ ಪ್ರದರ್ಶಿಸಿ ಬೈಕ್ ರ್ಯಾಲಿಗೆ ಚಾಲನೆ ನೀಡುವ ಮೂಲಕ ಕರಾಳ ದಿನವನ್ನ ಆಚರಿಸಿತು. ಮಹಾನಗರ ಪಾಲಿಕೆ ಮೇಯರ್ ಸರೀತಾ ಪಾಟೀಲ, ಉಪಮೇಯರ್ ಸಂಜಯ ಶಿಂಧೆ, ಶಾಸಕ ಸಂಭಾಜಿ ಪಾಟೀಲ ಸೇರಿದಂತೆ ಪಾಲಿಕೆಯ ಬಹುತೇಕ ಎಂಇಎಸ್ ಸದಸ್ಯರು ಭಾಗಿಯಾಗಿದ್ದರು. ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಿದ ಎಂಇಎಸ್ ಕಾರ್ಯಕರ್ತರು, ರಾಜ್ಯೋತ್ಸವಕ್ಕೆ ಕಟ್ಟಲಾಗಿದ್ದ ಬಾವುಟ, ಬಂಟಿಂಗ್ ಕಿತ್ತೆಸೆಯುವ ಪ್ರಯತ್ನ ಮಾಡಿದರು. ಅಲ್ಲದೆ ಕಲ್ಲು ತೂರಾಟ ನಡೆಸಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.
