ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ: ಕನೀಜ್ ಫಾತಿಮಾ

Late Qamarul Islams Wife Kaniz Fathima Demands Ministerial Berth
Highlights

  • ಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕಿ ಹಾಗೂ ದಿ. ಖಮರುಲ್ ಇಸ್ಲಾಂ ಪತ್ನಿ ಖನೀಜ್ ಫಾತೀಮಾ ಬೇಗಂ
  • ರಾಜ್ಯದಲ್ಲಿಯೇ ವಿಧಾನಸಭೆಗೆ ಆಯ್ಕೆಯಾಗಿರುವ ಏಕೈಕ ಮುಸ್ಲಿಂ ಮಹಿಳಾ ಸದಸ್ಯೆ 

 

ಕಲಬುರಗಿ : ರಾಜ್ಯದಲ್ಲಿ ಕಳೆದ ವಾರ ಅಸ್ತಿತ್ವಕ್ಕೆ ಬಂದಿರುವ ಮೈತ್ರಿಕೂಟ ಸರ್ಕಾರದಲ್ಲಿ ಸಚಿವ ಸಂಪುಟ ಈಗಲೂ ಕಗ್ಗಾಂಟಾಗಿ ಉಳಿದಿದೆ. ಉಭಯ ಪಕ್ಷಗಳ ಅನುಭವಿ ಶಾಸಕರು ಮಂತ್ರಿಹುದ್ದೆಗೆ ಭಾರೀ ಪೈಪೋಟಿ ನಡೆಸುತ್ತಿದ್ದು, ಇದೀಗ  ಕಾಂಗ್ರೆಸ್ ಶಾಸಕಿ ಹಾಗೂ ದಿ. ಖಮರುಲ್ ಇಸ್ಲಾಮ್ ಪತ್ನಿ ಕನೀಜ್ ಫಾತಿಮಾ ಕೂಡಾ ‘ಮಂತ್ರಿ ಸ್ಥಾನ’ದ ರೇಸ್‌ಗೆ ಧುಮುಕಿದ್ದಾರೆ.

ಕಲಬುರಗಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕನೀಜ್ ಫಾತಿಮಾ , ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ, ರಾಜ್ಯದಲ್ಲಿಯೇ ವಿಧಾನಸಭೆಗೆ ಆಯ್ಕೆಯಾಗಿರುವ ಮುಸ್ಲಿಂ ಮಹಿಳಾ ಸದಸ್ಯೆ ನಾನಾಗಿದ್ದೇನೆ ಹೀಗಾಗಿ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡ್ತಿನಿ, ಎಂದಿದ್ದಾರೆ.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೂ ನನಗೂ ಸಚಿವ ಸ್ಥಾನದ ನೀಡಿದ್ರೂ ಸ್ವಾಗತ, ಈ ಕುರಿತು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡುತ್ತೇನೆ, ಸಚಿವ ಸ್ಥಾನ ನೀಡುವ ಬಗ್ಗೆ ನನಗೆ ಹೈಕಮಾಂಡ್ ಮೇಲೆ ನಂಬಿಕೆ ಇದೆ, ಎಂದು ಕನೀಜ್ ಫಾತಿಮಾ ಹೇಳಿದ್ದಾರೆ.

6 ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದ  ಖಮರುಲ್ ಇಸ್ಲಾಮ್ ಕಳೆದ ಸಪ್ಟಂಬರ್‌ನಲ್ಲಿ ನಿಧನಹೊಂದಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ಉತ್ತರದಿಂದ ಕಾಂಗ್ರೆಸ್ ಅವರ ಪತ್ನಿ ಕನೀಜ್ ಫಾತಿಮಾರನ್ನು ಕಣಕ್ಕಿಳಿಸಿತ್ತು.

loader