ರಾಯಚೂರು[ಏ. 01]  ನ್ಯೂಜೆರ್ಸಿಯಲ್ಲಿ ಅನುಮಾಸ್ಪದವಾಗಿ ಮೃತಪಟ್ಟಿದ್ದ ಸಿಂಧನೂರಿನ ವೈದ್ಯರ ಅಂತಿಮ ವಿಧಿ ವಿಧಾನವನ್ನು ಸೋಮವಾರ ನೆರವೇರಿಸಲಾಯಿತು.

ಸಿಂಧನೂರು ತಾಲೂಕಿನ ಗಾಂಧಿನಗರದ ಮಣಿದೀಪ್ ನಂದಿಗಮ್ (28) ಮಾರ್ಚ್ 27 ರಂದು ಅನುಮಾಸ್ಪದವಾಗಿ ಮೃತಪಟ್ಟಿದ್ದರು. ಮೃತಪಟ್ಟು 6 ದಿನಗಳ ನಂತರ ತಾಯ್ನಾಡಿಗೆ ಅವರ ಪಾರ್ಥಿವ ಶರೀರ ತರಲಾಗಿತ್ತು.

ಭಾನುವಾರ ಸಂಜೆ ವಿಶೇಷ ವಿಮಾನದ ಮೂಲಕ ಹೈದರಾಬಾದ್ ತಲುಪಿದ್ದ ಮೃತ ದೇಹವನ್ನು  ಇಂದು  ಬೆಳಿಗ್ಗೆ ಸ್ವಗ್ರಾಮ ಗಾಂಧಿನಗರಕ್ಕೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.  ಸ್ವಗ್ರಾಮ ಗಂಧಿನಗರದಲ್ಲೆ ವಿಧಿ ವಿಧಾನಗಳ ಮೂಲಕ ಅಂತಿಮ ಕುಟುಂಬಸ್ಥರು ಅಂತಿಮ ವಿಧಿ ನೆರವೇರಿಸಿದರು.