2016-17 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ತುಂಬಲು ಜು.31 ರಿಂದ  ಆ.06 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ನವದೆಹಲಿ (ಜು.31): 2016-17 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ತುಂಬಲು ಜು.31 ರಿಂದ ಆ.06 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ಆನ್’ಲೈನ್’ನಲ್ಲಿ ರಿಟರ್ನ್ ತುಂಬುವವರ ಸಂಖ್ಯೆ ಹೆಚ್ಚಾಗಿದ್ದರಿಂದ ವೆಬ್’ಸೈಟ್’ನಲ್ಲಿ ತೊಡಕುಂಟಾದ ಕಾರಣ ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಜು.31 ರಿಂದ ಆ. 5 ಕ್ಕೆ ಮುಂದೂಡಲಾಗಿದೆ ಎಂದು ಐಟಿ ಇಲಾಖೆ ಹೇಳಿದೆ.

ಡಿಮಾನಿಟೈಸೇಶನ್ ಬಳಿಕ ನ.08 ರಿಂದ ಡಿ. 30 ರವರೆಗೆ 2 ಲಕ್ಷಕ್ಕಿಂತ ಅಧಿಕ ನಗದು ವ್ಯವಹಾರ ಮಾಡಿದವರು ಕಡ್ಡಾಯವಾಗಿ ಅದನ್ನು ನಮೂದಿಸಬೇಕು. ಅದೇ ರೀತಿ ತೆರಿಗೆ ಪಾವತಿದಾರರು ಪಾನ್ ಕಾರ್ಡ್’ಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.