ಉಪಚುನಾವಣೆ ವೇಳೆ ವ್ಯಾಪಕ ಇವಿಎಂ ದೋಷ ಆರೋಪ

First Published 29, May 2018, 7:56 AM IST
Large scale EVM malfunctioning reported
Highlights

ಸೋಮವಾರ ದೇಶದ ವಿವಿಧೆಡೆ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮತ್ತೊಮ್ಮೆ ಎಲೆಕ್ಟ್ರಾನಿಕ್‌ ಮತಯಂತ್ರ(ಇವಿಎಂ) ಕುರಿತು ಭಾರಿ ಗದ್ದಲ ಉಂಟಾಗಿದೆ. ವಿವಿಧೆಡೆಗಳಲ್ಲಿ ಮತಯಂತ್ರಗಳಲ್ಲಿ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ, ಬಿಜೆಪಿಯೂ ಸೇರಿದಂತೆ ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಕೆಲವೆಡೆ ಮರುಮತದಾನಕ್ಕೆ ಒತ್ತಾಯಿಸಿವೆ.

ನವದೆಹಲಿ: ಸೋಮವಾರ ದೇಶದ ವಿವಿಧೆಡೆ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮತ್ತೊಮ್ಮೆ ಎಲೆಕ್ಟ್ರಾನಿಕ್‌ ಮತಯಂತ್ರ(ಇವಿಎಂ) ಕುರಿತು ಭಾರಿ ಗದ್ದಲ ಉಂಟಾಗಿದೆ. ವಿವಿಧೆಡೆಗಳಲ್ಲಿ ಮತಯಂತ್ರಗಳಲ್ಲಿ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ, ಬಿಜೆಪಿಯೂ ಸೇರಿದಂತೆ ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಕೆಲವೆಡೆ ಮರುಮತದಾನಕ್ಕೆ ಒತ್ತಾಯಿಸಿವೆ.

ಕೈರಾನ ಲೋಕಸಭಾ ಕ್ಷೇತ್ರ ಮತ್ತು ನೂರ್ಪುರ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಇವಿಎಂಗಳು ಮತ್ತು ವಿವಿಪ್ಯಾಟ್‌ಗಳಲ್ಲೂ ದೋಷ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯೂ ಸೇರಿದಂತೆ ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿವೆ. ಆದರೆ, ಆರೋಪಗಳನ್ನು ನಿರಾಕರಿಸಿರುವ ಚುನಾವಣಾ ಆಯೋಗ ಈ ಕುರಿತ ವರದಿಗಳು ಉತ್ಪ್ರೇಕ್ಷೆಯಿಂದ ಕೂಡಿವೆ ಎಂದಿದೆ. 

ತಾಪಮಾನ ಹೆಚ್ಚಾಗಿದ್ದುದರಿಂದ ಇವಿಎಂಗಳಲ್ಲಿ ದೋಷ ಕಂಡು ಬಂದಿರುವ ಸಾಧ್ಯತೆಯಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಕೈರಾನ ಮತ್ತು ನೂರ್ಪುರದ 197 ಬೂತ್‌ಗಳಲ್ಲಿ ಇವಿಎಂಗಳಲ್ಲಿ ದೋಷವಿತ್ತು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್‌ ನಿಯೋಗವು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ. ಮಹಾರಾಷ್ಟ್ರದ ಭಂಡಾರ-ಗೊಂಡಿಯಾ ಕ್ಷೇತ್ರದ 35 ಬೂತ್‌ಗಳಲ್ಲಿ ಇವಿಎಂ ದೋಷ ಕಂಡುಬಂದಿತ್ತು.

loader