ತಿರುವನಂತಪುರಂನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದೊಳಗಿದ್ದ ಲ್ಯಾಪ್’ಟಾಪ್’ಗೆ ಬೆಂಕಿ ಹತ್ತಿಕೊಂಡಿರುವ ಘಟನೆ ನಡೆದಿದೆ. ಸಿಬ್ಬಂದಿಗಳ ಸಮಯಪ್ರಜ್ಞೆಯಿಂದಾಗಿ  ಸಂಭವಿಸಬಹುದಾಗಿದ್ದ ಭಾರೀ ಅವಘಡ ತಪ್ಪಿದೆ.

ನವದೆಹಲಿ: ತಿರುವನಂತಪುರಂನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದೊಳಗಿದ್ದ ಲ್ಯಾಪ್’ಟಾಪ್’ಗೆ ಬೆಂಕಿ ಹತ್ತಿಕೊಂಡಿರುವ ಘಟನೆ ನಡೆದಿದೆ. ಸಿಬ್ಬಂದಿಗಳ ಸಮಯಪ್ರಜ್ಞೆಯಿಂದಾಗಿ ಭಾರೀ ಅವಘಡ ತಪ್ಪಿದೆ.

ಕಳೆದ ಶನಿವಾರ ತಿರುವನಂತಪುರಂನಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದೊಳಗೆ ಲ್ಯಾಪ್’ಟಾಪ್ ಇಡಲಾಗಿದ್ದ ಕಪ್ಪು ಬ್ಯಾಗ್’ವೊಂದರಿಂದ ಹೊಗೆ ಬರುತ್ತಿದ್ದುದ್ದನ್ನು ಗಮನಿಸಿದ ಪ್ರಯಾಣಿಕರು ಸಿಬ್ಬಂದಿಗೆ ತಿಳಿಸಿದ್ದಾರೆ. ಸಿಬ್ಬಂದಿ ಕೂಡಲೆ ಅಕ್ಕಪಕ್ಕದ ಸೀಟಿನಲ್ಲಿದ್ದ ಪ್ರಯಾಣಿಕರನ್ನು ಬೇರೆಡೆಗೆ ಸ್ಥಳಾಂತರಿಸಿ ಅಗ್ನಿನಂದಕಗಳನ್ನು ಬಳಸಿ ಅದನ್ನು ಶಮನಗೊಳಿಸಿದ್ದಾರೆ. ಬಳಿಕ ಆ ಬ್ಯಾಗನ್ನು ನೀರಿನ ಕಂಟೈನರ್ ‘ನಲ್ಲಿರಿಸಿದ್ದಾರೆ.

ಈ ಘಟನೆಯನ್ನು ಖಾತ್ರಿಪಡಿಸಿರುವ ಇಂಡಿಗೋ ಅಧಿಕಾರಿಗಳು, ಸಹಕರಿಸಿದ ಪ್ರಯಾಣಿಕರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಇತ್ತೀಚಿಗಿನ ದಿನಗಳಲ್ಲಿ ವಿಮಾನದಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಬೆಂಕಿ ಹತ್ತಿಕೊಳ್ಳುವ ಘಟನೆಗಳು ಹೆಚ್ಚುತ್ತಿವೆ. ಕಳೆದ ತಿಂಗಳು ದೆಹಲಿ-ಇಂದೋರ್ ತೆರಳುತ್ತಿದ್ದ ವಿಮಾನವೊಂದರಲ್ಲಿ ಮೊಬೈಲ್ ಫೋನ್’ಗೆ ಬೆಂಕಿ ಹತ್ತಿಕೊಂಡಿತ್ತು.