ಹೃಷಿಕೇಶ-ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯ 60 ಮೀಟರ್ ರಸ್ತೆ ಹಾಗೂ ಭೂಕುಸಿತವುಂಟಾದ ಸ್ಥಳದ 150 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದೆ.ಆದಾಗ್ಯೂ ಯಾವೊಬ್ಬ ಭಕ್ತರು ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.
ಡೆಹ್ರಾಡೂನ್(ಮೇ.19): ಪ್ರಸಿದ್ಧ ಯಾತ್ರ ಸ್ಥಳ ಬದರೀನಾಥ್' - ಚಾರ್'ದಾಮ್ ಯಾತ್ರಾ ಸ್ಥಳಕ್ಕೆ ಹೋಗುವ ಮಾರ್ಗ ಮಧ್ಯೆ ಚಮೇಲಿ ಜಿಲ್ಲೆಯ ವಿಷ್ಣು ಪ್ರಯಾಗ'ದ ಹಾಥಿ ಪರ್ವತ್'ನಲ್ಲಿ ಉಂಟಾದ ಭಾರಿ ಪ್ರಮಾಣದ ಭೂಕುಸಿತದಿಂದ ಸುಮಾರು 14 ಸಾವಿರ ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ.
ಹೃಷಿಕೇಶ-ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯ 60 ಮೀಟರ್ ರಸ್ತೆ ಹಾಗೂ ಭೂಕುಸಿತವುಂಟಾದ ಸ್ಥಳದ 150 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದೆ.ಆದಾಗ್ಯೂ ಯಾವೊಬ್ಬ ಭಕ್ತರು ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಗಡಿ ರಸ್ತೆಗಳ ಸಂಸ್ಥೆ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಪರಿಸ್ಥಿತಿಯನ್ನು ನಿಭಯಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಭಗ್ನಾವಶೇಷವನ್ನು ತೆರವುಗೊಳಿಸಿ ಸಹಜ ಸ್ಥಿತಿಗೆ ತರಲಾಗುವುದು ಎಂದು ಚಮೋಲಿಯ ಎಸ್'ಪಿ ತೃಪ್ತಿ ಭಟ್ ತಿಳಿಸಿದ್ದಾರೆ.
ತೋಡುವ ಯಂತ್ರಗಳು, ಬುಲ್ಡೋಜರ್'ಗಳ ಮೂಲಕ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದ್ದು, ಸಾಧ್ಯವಾದಷ್ಟು ಬೇಗ ರಸ್ತೆಯನ್ನು ಸರಿಪಡಿಸಲಾಗುವುದು ಎಂದು ಎಸ್'ಪಿ ತಿಳಿಸಿದ್ದಾರೆ. 2015ರಲ್ಲಿ ಭಾರಿ ಮಳೆಯಿಂದ ಒರಿಸ್ಸಾ'ದಲ್ಲಿ ಭೂಕುಸಿತವುಂಟಾಗಿ 300 ಮಂದಿ ಯಾತ್ರಾರ್ಥಿ'ಗಳು ಸಿಲುಕಿಕೊಂಡಿದ್ದರು.
