ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ಅವರಿಗೆ ಅಶೋಕ ಚಕ್ರ ಪುರಸ್ಕಾರ| ಭಯೋತ್ಪಾದಕರ ವಿರುದ್ದದ ಎನ್ ಕೌಂಟರ್ ನಲ್ಲಿ ಹುತಾತ್ಮರಾಗಿದ್ದ ವಾನಿ| ವಾನಿಗೆ ಅಶೋಕ ಚಕ್ರ ಪುರಸ್ಕಾರ ಪ್ರಕಟಿಸಿದ ರಾಷ್ಟ್ರಪತಿ ಭವನ| ಹಿಂದೊಮ್ಮೆ ಭಯೋತ್ಪಾದಕರಾಗಿದ್ದ ನಝೀರ್ ಅಹ್ಮದ್ ವಾನಿ| ಶರಣಾಗತಿ ಬಳಿಕ ಭಾರತೀಯ ಸೇನೆಗೆ ಸೇರ್ಪಡೆ
ನವದೆಹಲಿ(ಜ.24): ಭಯೋತ್ಪಾದಕರ ವಿರುದ್ದದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾಗಿದ್ದ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ಅವರಿಗೆ, ಶಾಂತಿ ಸಮಯದಲ್ಲಿ ಭಾರತ ಸರ್ಕಾರ ನಿಡುವ ಅತ್ಯುನ್ನತ ಪ್ರಶಸ್ತಿ ಅಶೋಕ ಚಕ್ರ ಪುರಸ್ಕಾರ ಸಂದಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಪ್ರದೇಶದ ಬತಗುಂದ್ ಗ್ರಾಮದಲ್ಲಿ, ಭಯೋತ್ಪಾದಕರೊಂದಿಗೆ ಹೋರಾಡುತ್ತಾ ಝೀರ್ ಅಹ್ಮದ್ ವಾನಿ ಹುತಾತ್ಮರಾಗಿದ್ದರು.
ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ಭಯೋತ್ಪಾದಕರೊಂದಿಗೆ ಹೋರಾಡುತ್ತಲೇ, ಗಾಯಾಳುಗಳಾಗಿದ್ದ ತಮ್ಮ ಸಹೋದ್ಯೋಗಿ ಸೈನಿಕರನ್ನು ಉಳಿಸಲು ಶ್ರಮವಹಿಸಿದ್ದರು. ಈ ಮೂಲಕ ತಮ್ಮ ಪ್ರಾಣವನ್ನೇ ಸಮರ್ಪಿಸಿ ಅತ್ಯುನ್ನತ ತ್ಯಾಗ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಅಧಿಸೂಚನೆಯಲ್ಲಿ ವಿವರಿಸಿದೆ.
ಈ ಹಿಂದೆ ಸ್ವತಃ ಉಗ್ರಗಾಮಿಯಾಗಿದ್ದ ಅಹ್ಮದ್ ವಾನಿ, ಶರಣಾಗತಿ ಬಳಿಕ ಸೈನ್ಯಕ್ಕೆ ಸೇರಿ ಎರಡು ಬಾರಿ ಸೇನಾ ಪದಕ ವಿಜೇತರಾಗಿದ್ದರು. ಕುಲ್ಗಮ್ ನ ಚೆಕಿ ಅಶ್ಮುಜೀ ಗ್ರಾಮದ ನಿವಾಸಿಯಾಗಿದ್ದ ವಾನಿ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.
ಅಂದು ಉಗ್ರ, ಇಂದು ಭಾರತಕ್ಕಾಗಿ ಬಲಿದಾನ: ಹೀಗೋರ್ವ ಸೈನಿಕನ ಕಥೆ!
ನೀವಲ್ಲ ಏಕಾಂಗಿ, ನಾನಿದ್ದೀನಿ ಮಗನಾಗಿ: ಹುತಾತ್ಮನ ತಂದೆಗೆ ಸೈನಿಕನ ಸಾಂತ್ವನ
