ಧನುರ್ಮಾಸ ಮುಗಿದ ಬಳಿಕ ಲಾಲು ಜಾಮೀನು ಅರ್ಜಿ

First Published 13, Jan 2018, 10:35 AM IST
Lalu Prasad not to move for bail during Inauspicious period
Highlights

ಪಕ್ಕಾ ಸಂಪ್ರದಾಯಸ್ಥರಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲು, ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲೂ ಶುಭ ಸಮಯಕ್ಕಾಗಿ ಕಾದಿದ್ದಾರೆ.

ರಾಂಚಿ: ಪಕ್ಕಾ ಸಂಪ್ರದಾಯಸ್ಥರಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲು, ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲೂ ಶುಭ ಸಮಯಕ್ಕಾಗಿ ಕಾದಿದ್ದಾರೆ. ಹೌದು. ಮೇವು ಹಗರಣ ಸಂಬಂಧ ಡಿ.23ರಂದು ಲಾಲುಗೆ ನ್ಯಾಯಾಲಯ ಮೂರೂವರೆ ಜೈಲು ಶಿಕ್ಷೆ ವಿಧಿಸಿತ್ತು. ಪರಿಣಾಮ ಜೈಲು ಸೇರಿದ್ದಾರೆ.

ಆದರೆ ಇಷ್ಟು ದಿನವಾದರೂ ಲಾಲು ಇನ್ನೂ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಕಾರಣ ಪವಿತ್ರ ಕಾರ್ಯಗಳಿಗೆ ಶುಭವಲ್ಲ ಎಂದು ಹೇಳಲಾದ ಧನುರ್ಮಾಸ. ಡಿ.14ರಿಂದ ಜ.14ರವರೆಗೆ ಧನುರ್ಮಾಸವಿದ್ದು, ಈ ಅವಧಿಯಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸದಂತೆ ಲಾಲು ತಮ್ಮ ವಕೀಲರಿಗೆ ಸೂಚಿಸಿದ್ದಾರಂತೆ.

loader