ನಿರ್ಮಾಪಕ ಸುಂದರ್​ಗೌಡ, ಲಕ್ಷ್ಮಿ ನಾಯ್ಕ್​ ಮದುವೆ ಪ್ರಕರಣ ಇನ್ನು ಹಗ್ಗ ಜಗ್ಗಾಟದಲ್ಲೇ ಇದೆ. ಮದುವೆಯಾದ ದಂಪತಿಗಳು ನಟ ದುನಿಯಾ ವಿಜಿ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ವಿಚಾರ ತಿಳಿದು ದುನಿಯಾ ವಿಜಿ ಮನೆಗೆ ತೆರಳಿದ ಮಾಧ್ಯಮದವರನ್ನು ವಿಜಿ ತಡೆದಿದ್ದಾರೆ. 

ಬೆಂಗಳೂರು (ಮಾ. 09): ನಿರ್ಮಾಪಕ ಸುಂದರ್​ಗೌಡ, ಲಕ್ಷ್ಮಿ ನಾಯ್ಕ್​ ಮದುವೆ ಪ್ರಕರಣ ಇನ್ನು ಹಗ್ಗ ಜಗ್ಗಾಟದಲ್ಲೇ ಇದೆ. ಮದುವೆಯಾದ ದಂಪತಿಗಳು ನಟ ದುನಿಯಾ ವಿಜಿ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ವಿಚಾರ ತಿಳಿದು ದುನಿಯಾ ವಿಜಿ ಮನೆಗೆ ತೆರಳಿದ ಮಾಧ್ಯಮದವರನ್ನು ವಿಜಿ ತಡೆದಿದ್ದಾರೆ. 

ದುನಿಯಾ ವಿಜಿ ನೇತೃತ್ವದಲ್ಲಿ ಸುಂದರ್ ಗೌಡ, ಲಕ್ಷ್ಮೀ ಯಲಹಂಕ ನ್ಯೂಟೌನ್​ ಪೊಲೀಸ್​ ಠಾಣೆಗೆ ಆಗಮಿಸಿದ್ದಾರೆ. ಸ್ವ ಇಚ್ಛೆಯಿಂದ ಮದುವೆಯಾಗಿರುವುದಾಗಿ ಪೊಲೀಸರ ಮುಂದೆ ಹೇಳಿಕೆಯನ್ನು ನೀಡಿದ್ದಾರೆ. ಲಕ್ಷ್ಮಿಯನ್ನು ಸೊಸೆ ಮಾಡಿಕೊಂಡಿರುವುದಾಗಿ ಸುಂದರ್​ಗೌಡ ಪೋಷಕರು ಹೇಳಿದ್ದಾರೆ. ಆದರೆ ಲಕ್ಷ್ಮೀ ಪೋಷಕರು ಈ ಮದುವೆಯನ್ನು ಒಪ್ಪುತ್ತಿಲ್ಲ. ಮನೆಗೆ ಬಾ ಎಂದು ಕರೆಯುತ್ತಿದ್ದರೂ ಮಗಳು ಒಪ್ಪುತ್ತಿಲ್ಲ.

ಈ ಮಧ್ಯೆ ಲಕ್ಷ್ಮೀ ಅಜ್ಜಿ ಅಸ್ವಸ್ಥರಾಗಿದ್ದಾರೆ.