ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಮತ್ತೊಂದು ಮಸೀದಿ ವಿವಾದ ಭುಗಿಲೇಳುವ ಲಕ್ಷಣವಿದೆ. ನಗರದ ತೀಲಿವಾಲಿ ಮಸೀದಿ ಹೊರಗೆ ಶ್ರೀರಾಮನ ಸಹೋದರ ಲಕ್ಷ್ಮಣನ ಪ್ರತಿಮೆ ಸ್ಥಾಪಿಸಲು ಲಖನೌ ನಗರ ನಿಗಮ ನಿರ್ಧರಿಸಿದೆ. ಆದರೆ, ನಗರಾಡಳಿತದ ನಿರ್ಧಾರಕ್ಕೆ ಮುಸ್ಲಿಮ್‌ ವಿದ್ವಾಂಸರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಶತಮಾನಗಳಷ್ಟುಹಳೆಯದಾದ ತೀಲಿವಾಲಿ ಮಸೀದಿ, ವಾಸ್ತವದಲ್ಲಿ ಲಕ್ಷಣನ ತೀಲಾ ಎಂದು ಈ ಹಿಂದೆ ಬಿಜೆಪಿ ನಾಯಕ ಲಾಲ್‌ಜೀ ಟಂಡನ್‌ರ ಪುಸ್ತಕ ಅಂಕಾಹ ಲಖನೌನಲ್ಲಿ ಹೇಳಲಾಗಿತ್ತು. ಆದಾಗ್ಯೂ, ಈ ಪ್ರದೇಶ ಪುರಾತತ್ವಶಾಸ್ತ್ರ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದರಿಂದ, ಪ್ರತಿಮೆ ಸ್ಥಾಪಿಸಲು ನಗರಾಡಳಿತ ಪುರಾತತ್ವಶಾಸ್ತ್ರ ಇಲಾಖೆಯ ಅನುಮತಿ ಪಡೆಯಬೇಕಾಗಿದೆ.

ಇನ್ನೊಂದೆಡೆ, ಪ್ರತಿಮೆ ಸ್ಥಾಪಿಸಿದರೆ ಪ್ರಾರ್ಥನೆಗೆ ಅಡಚಣೆಯಾಗುತ್ತದೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡರು, ಪ್ರತಿಮೆ ಸ್ಥಾಪನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈದ್‌ ಮತ್ತಿತರ ಪ್ರಮುಖ ಕಾರ್ಯಕ್ರಮಗಳ ಸಂದರ್ಭ ಲಕ್ಷಾಂತರ ಮುಸ್ಲಿಮರು ಮಸೀದಿ ಹೊರಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇಸ್ಲಾಂನಲ್ಲಿ ಪ್ರತಿಮೆಯ ಮುಂದೆ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲವಾದುದರಿಂದ, ಪ್ರತಿಮೆ ಸ್ಥಾಪಿಸಿದಲ್ಲಿ ಅನಾನುಕೂಲವಾಗುತ್ತದೆ. ಹೀಗಾಗಿ ನಿರ್ಧಾರ ಮರುಪರಿಶೀಲಿಸುವಂತೆ ಉನ್ನತಾಧಿಕಾರಿಗಳಲ್ಲಿ ವಿನಂತಿಸುತ್ತೇವೆ ಎಂದು ತೀಲಿವಾಲಿ ಮಸೀದಿಯ ಮೌಲಾನಾ ಫಜಲ್‌-ಇ-ಮನ್ನಾನ್‌ ಹೇಳಿದ್ದಾರೆ.ವು ಪ್ರತಿಯೊಬ್ಬರ ಭಾವನೆಗಳನ್ನೂ ಗೌರವಿಸ್ತುತೇವೆ, ಯಾರಿಗಾದರೂ ತೊಂದರೆ ಎನಿಸಿದಲ್ಲಿ ನಿರ್ಧಾರ ಮರುಪರಿಶೀಲಿಸುತ್ತೇವೆ. ಪ್ರತಿಮೆ ಪ್ರತಿಷ್ಠಾಪನಾ ಸ್ಥಳ ಇನ್ನೂ ನಿಗದಿಯಾಗಿಲ್ಲ ಎಂದು ಲಖನೌ ಮೇಯರ್‌ ಸಂಯುಕ್ತ ಭಾಟಿಯಾ ಹೆಳಿದ್ದಾರೆ.