ಜ್ಯೋತಿ, ನ್ಯಾಯಕ್ಕಾಗಿ ಹೋರಾಡುವ ಕನಸನ್ನು ಕಂಡಿದ್ದವಳು, ಅದಕ್ಕೆ ಆಕೆ ಆಯ್ಕೆ ಮಾಡಿಕೊಂಡಿದ್ದು ವಕೀಲ ವೃತ್ತಿಯನ್ನು. ಅದೇ ರೀತಿ ಪ್ರಾಕ್ಟಿಸ್ ಕೂಡಾ ಮಾಡುತ್ತಿದ್ದಳು. ಆದರೆ ಅದೇನಾಯ್ತೋ ಗೊತ್ತಿಲ್ಲ ನಿನ್ನೆ ಸಂಜೆ 6.40ಕ್ಕೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣದ ಬಳಿ ನಿಂತಿದ್ದ ಜ್ಯೋತಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾಳೆ
ಬೆಂಗಳೂರು(ಡಿ.18): ಜ್ಯೋತಿ, ನ್ಯಾಯಕ್ಕಾಗಿ ಹೋರಾಡುವ ಕನಸನ್ನು ಕಂಡಿದ್ದವಳು, ಅದಕ್ಕೆ ಆಕೆ ಆಯ್ಕೆ ಮಾಡಿಕೊಂಡಿದ್ದು ವಕೀಲ ವೃತ್ತಿಯನ್ನು. ಅದೇ ರೀತಿ ಪ್ರಾಕ್ಟಿಸ್ ಕೂಡಾ ಮಾಡುತ್ತಿದ್ದಳು. ಆದರೆ ಅದೇನಾಯ್ತೋ ಗೊತ್ತಿಲ್ಲ ನಿನ್ನೆ ಸಂಜೆ 6.40ಕ್ಕೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣದ ಬಳಿ ನಿಂತಿದ್ದ ಜ್ಯೋತಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾಳೆ. ಈ ಕುರಿತ ವರದಿ ಇಲ್ಲಿದೆ ನೋಡಿ.
ಮೂಲತಃ ಕನಕಪುರದ ಜ್ಯೋತಿ, ರಾಜಾಜಿನಗರದ ಪಿಜಿಯೊಂದರಲ್ಲಿ ಉಳಿದುಕೊಂಡು ಲಾಯರ್ ಕಚೇರಿ ಒಂದರಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಳು. ಆದರೆ ನಿನ್ನೆ ಪ್ರಾಕ್ಟೀಸ್ ಮುಗಿಸಿ ಪಿಜಿಗೆ ತೆರಳುವ ವೇಳೆ ನಡೆದುಕೊಂಡು ಬಂದ ಯುವಕನೊಬ್ಬ ಏಕಾಏಕಿ ಜ್ಯೋತಿ ಕತ್ತನ್ನು ಕೊಯ್ದು ಎಸ್ಕೇಪ್ ಆಗಿದ್ದಾನೆ. ತೀವ್ರ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಜ್ಯೋತಿ ಸಾವಿಗೀಡಾಗಿದ್ದಾಳೆ. ಪೊಲೀಸರು ಹಂತಕರ ಹುಡುಕಾಟ ಆರಂಭಿಸಿದ್ದಾರೆ.
ಮೇಲ್ನೋಟಕ್ಕೆ ಪ್ರೀತಿ ವಿಷಯಕ್ಕೆ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಸದ್ಯ ಓರ್ವನನ್ನು ವಶಕ್ಕೆ ಪಡೆದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
