ಸಾಂಸ್ಕೃತಿಕ ನಗರಿ ಮೈಸೂರಿನಲ್ಲೀಗ ಮಹಿಳಾ ರೌಡಿಸಂ ಕಾಟ. ಅಮಾಯಕರು ಸಿಕ್ಕರೆ ಅವರ ಆಸ್ತಿ ಲಪಟಾಯಿಸಲು ಹೊಂಚು ಹಾಕೋ ಗ್ಯಾಂಗ್ ಇದು. ಕೆಂಪಮ್ಮಣ್ಣಿಯೇ ಎಂಬ ಮಹಿಳೆಯೇ ಈ ಗ್ಯಾಂಗ್’ನ ಲೀಡರ್!
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲೀಗ ಮಹಿಳಾ ರೌಡಿಸಂ ಕಾಟ. ಅಮಾಯಕರು ಸಿಕ್ಕರೆ ಅವರ ಆಸ್ತಿ ಲಪಟಾಯಿಸಲು ಹೊಂಚು ಹಾಕೋ ಗ್ಯಾಂಗ್ ಇದು. ಕೆಂಪಮ್ಮಣ್ಣಿಯೇ ಎಂಬ ಮಹಿಳೆಯೇ ಈ ಗ್ಯಾಂಗ್’ನ ಲೀಡರ್!
ಬೆಮೆಲ್ ನಗರದ ಗುರುಮಲ್ಲೇಶ್ ಮತ್ತು ಜ್ಯೋತಿ ದಂಪತಿಗೂ ಇದೇ ರೀತಿ ಮೋಸ ಮಾಡಿದ್ದಾರೆನ್ನಲಾಗಿದೆ. ಸಾಲ ಕೊಡೋದಾಗಿ ನಂಬಿಸಿ, ಸಾಲದ ಪತ್ರಕ್ಕೆ ಬಲವಂತ ಸಹಿ ಹಾಕಿಸಿದ ಗ್ಯಾಂಗ್, ದಂಪತಿ ಮನೆಯಲ್ಲಿ ಇಲ್ಲದಿದ್ದಾಗ 8 ಮಂದಿ ಬಂದು ಮನೆ ಅತಿಕ್ರಮಣ ಮಾಡಿದ್ದಾರೆನ್ನಲಾಗಿದೆ. ಮನೆಯ ಬೀಗ ಒಡೆಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಅದನ್ನು ಪ್ರಶ್ನಿಸಿದ ಜ್ಯೋತಿ ಗಂಡ ಗುರುಮಲ್ಲೇಶ್ ಮೇಲೆ ಕೆಂಪಮಣ್ಣಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲವೆನ್ನಲಾಗಿದೆ. ಒಂದೆಡೆ ಜ್ಯೋತಿ, ಗುರುಮಲ್ಲೇಶ್ ದಂಪತಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರಾದರೆ, ಇನ್ನೊಂದೆಡೆ ಕೆಂಪಮ್ಮಣಿ ಗ್ಯಾಂಗ್’ಗೆ ಪೊಲೀಸರದ್ದೇ ರಕ್ಷಣೆ ಇದೆ ಎಂಬ ಆರೋಪವೂ ಕೇಳಿ ಬಂದಿದೆ.
