ನವಜಾತ ಶಿಶುಗಳಿಗೆ ಎದೆ ಹಾಲು ಉಣಿಸುವಷ್ಟು ಹಾಲು ತಮಗೆ ಉತ್ಪತ್ತಿಯಾಗುತ್ತಿಲ್ಲ ಎಂದು ಗೋಳು ತೋಡಿಕೊಳ್ಳುವ ಸಾಕಷ್ಟು ಮಹಿಳೆಯರು ಇದ್ದಾರೆ. ಆದರೆ ಅಮೆರಿಕದ ಓರೆಗಾನ್‌ನಲ್ಲಿರುವ ಮಹಿಳೆಯೊಬ್ಬರಿಗೆ ಬೇಡ ಬೇಡ ಎಂದರೂ ಭರಪೂರ ಹಾಲು ಉತ್ಪಾದನೆಯಾಗುತ್ತಿದೆ. ಹೀಗಾಗಿ 6 ತಿಂಗಳ ಅವಧಿಯಲ್ಲಿ 2300 ಲೀಟರ್ ಎದೆಹಾಲು ಹಂಚಿದ್ದಾಳೆ.

ವಾಷಿಂಗ್ಟನ್(ಆ.02): ನವಜಾತ ಶಿಶುಗಳಿಗೆ ಎದೆ ಹಾಲು ಉಣಿಸುವಷ್ಟು ಹಾಲು ತಮಗೆ ಉತ್ಪತ್ತಿಯಾಗುತ್ತಿಲ್ಲ ಎಂದು ಗೋಳು ತೋಡಿಕೊಳ್ಳುವ ಸಾಕಷ್ಟು ಮಹಿಳೆಯರು ಇದ್ದಾರೆ. ಆದರೆ ಅಮೆರಿಕದ ಓರೆಗಾನ್‌ನಲ್ಲಿರುವ ಮಹಿಳೆಯೊಬ್ಬರಿಗೆ ಬೇಡ ಬೇಡ ಎಂದರೂ ಭರಪೂರ ಹಾಲು ಉತ್ಪಾದನೆಯಾಗುತ್ತಿದೆ. ಹೀಗಾಗಿ 6 ತಿಂಗಳ ಅವಧಿಯಲ್ಲಿ 2300 ಲೀಟರ್ ಎದೆಹಾಲು ಹಂಚಿದ್ದಾಳೆ.

ಎಲಿಸಾಬೆತ್ ಆ್ಯಂಡರ್‌ಸನ್ ಎಂಬ ಮಹಿಳೆಗೆ ಹೆಚ್ಚು ಎದೆ ಹಾಲು ಉತ್ಪತ್ತಿ ತೊಂದರೆ (ಹೈಪರ್‌ಲ್ಯಾಕ್ಟೇಷನ್ ಸಿಂಡ್ರೋಮ್) ಎಂಬ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಆಕೆ ನಿತ್ಯ 10 ತಾಸನ್ನು ಎದೆಹಾಲು ಸಂಗ್ರಹಿಸಲು ಮೀಸಲಿಟ್ಟಿದ್ದಾಳೆ. ಇಬ್ಬರು ಮಕ್ಕಳ ತಾಯಿಯಾಗಿರುವ ಎಲಿಸಾಬೆತ್, ಕಿರಿಯ ಮಗುವಿಗಾಗಿ 1 ಲೀಟರ್‌ನಷ್ಟು ಎದೆ ಹಾಲು ಕುಡಿಸುತ್ತಾಳೆ.

ಆ ಬಳಿಕವೂ ಉಳಿಯುವ ಹಾಲನ್ನು ಎದೆಹಾಲಿನ ಕೊರತೆ ಎದುರಿಸುತ್ತಿರುವ ತಾಯಂದಿರು, ಮಕ್ಕಳನ್ನು ಹೊಂದಿರುವ ಸಲಿಂಗ ದಂಪತಿಗಳು ಹಾಗೂ ಅವಧಿಪೂರ್ವ ಜನಿಸಿದ ಮಕ್ಕಳಿಗೆ ಎದೆ ಹಾಲು ಪೂರೈಸುವ ಮಿಲ್ಕ್ ಬ್ಯಾಂಕ್‌ಗಳಿಗೆ ಸರಬರಾಜು ಮಾಡುತ್ತಾಳೆ.