ಪಾನಮತ್ತ ಪ್ರಯಾಣಿಕನನ್ನು ಮಹಿಳಾ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಸ್​​ನಿಂದ ಇಳಿಸಿದ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಘಟಕದ ಮಹಿಳಾ ಕಂಡಕ್ಟರ್ ಎಸ್.ಎಂ.ಗರಸಂಗಿ, ಪ್ರಯಾಣಿಕನ ಜತೆ ಜಗಳಕ್ಕಿಳಿದು ಬಸ್​`ನಿಂದ ಇಳಿಸಿದ ದೃಶ್ಯವಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹುಬ್ಬಳ್ಳಿ-ವಿಜಯಪುರ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನನ್ನು ಅವಾಚ್ಯವಾಗಿ ನಿಂದಿಸಿ, ಬಸ್​ನಿಂದ ಕೆಳಗಿಳಿಸುವುದನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಟಿಕೇಟ್ ವಿಚಾರದಲ್ಲಿ ಈ ಗಲಾಟೆ ನಡೆದಿದೆ.

ಹುಬ್ಬಳ್ಳಿ(ಜ.19): ಪಾನಮತ್ತ ಪ್ರಯಾಣಿಕನನ್ನು ಮಹಿಳಾ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಸ್​​ನಿಂದ ಇಳಿಸಿದ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಘಟಕದ ಮಹಿಳಾ ಕಂಡಕ್ಟರ್ ಎಸ್.ಎಂ.ಗರಸಂಗಿ, ಪ್ರಯಾಣಿಕನ ಜತೆ ಜಗಳಕ್ಕಿಳಿದು ಬಸ್​`ನಿಂದ ಇಳಿಸಿದ ದೃಶ್ಯವಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹುಬ್ಬಳ್ಳಿ-ವಿಜಯಪುರ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನನ್ನು ಅವಾಚ್ಯವಾಗಿ ನಿಂದಿಸಿ, ಬಸ್​ನಿಂದ ಕೆಳಗಿಳಿಸುವುದನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಟಿಕೇಟ್ ವಿಚಾರದಲ್ಲಿ ಈ ಗಲಾಟೆ ನಡೆದಿದೆ.

ಹಣ ಕೊಟ್ಟಿದ್ದೀನಿ ಅಂತ ಪ್ರಯಾಣಿಕ ವಾದಿಸಿದ್ರೆ, ದುಡ್ಡು ಕೊಟ್ಟಿಲ್ಲ ಅಂತ ನಿರ್ವಾಹಕಿ ಗರಸಂಗಿ ವಾದಿಸುತ್ತಿರೋದು ವಿಡಿಯೋದಲ್ಲಿ ದಾಖಲಾಗಿದೆ.. ಈ ವಿಡಿಯೋ ಸಂಸ್ಥೆ ಅಧಿಕಾರಿಗಳಿಗೂ ತಲುಪಿದೆ. ವಿಭಾಗೀಯ ಸಂಚಾರ ಶಾಖೆ ಮುಖ್ಯಸ್ಥರು, ವಿಡಿಯೋ ತುಣುಕು ಪರಿಶೀಲನೆ ಮಾಡಿದ್ದು, ಈ ಕುರಿತು ಘಟಕ ವ್ಯವಸ್ಥಾಪಕರಿಂದ ವರದಿ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.