ಅಪಘಾತದಲ್ಲಿ ಗಾಯಗೊಂಡಿರುವುದಾಗಿ ಹೇಳಿ ಆಸ್ಪತ್ರೆಗೆ ಸೇರಿಸಿ ಗಂಡ ಹಾಗೂ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪತಿಯ ಮೇಲೆ ಹಲ್ಲ ಮಾಡಿ ಆಕ್ರೊಷ ವ್ಯಕ್ತಪಡಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು(ಜು.16): ಅಪಘಾತದಲ್ಲಿ ಗಾಯಗೊಂಡಿರುವುದಾಗಿ ಹೇಳಿ ಆಸ್ಪತ್ರೆಗೆ ಸೇರಿಸಿ ಗಂಡ ಹಾಗೂ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪತಿಯ ಮೇಲೆ ಹಲ್ಲ ಮಾಡಿ ಆಕ್ರೊಷ ವ್ಯಕ್ತಪಡಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ನಗರದ ಸ್ಟೇಷನ್ ಬಡಾವಣೆಯಲ್ಲಿ ಘಟನೆ ಜರುಗಿದ್ದು. ಕಳೆದ ಮೂರು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ೩೬ ವರ್ಷದ ವಿಜಯಲಕ್ಷ್ಮಿ ದೀಢಿರ್ ಮೃತಪಟ್ಟಿದ್ದಾಳೆ. ಮೃತಳನ್ನು ಕರೆತಂದ ಪತಿ ಶವವನ್ನು ನೇರವಾಗಿ ತವರು ಮನೆಗೆ ತಂದು ನೀಡಿದ್ದಾನೆ.
ಆದರೆ ಮೃತಳ ತಂದೆ ತಾಯಿ ಅಪಘಾತದಲ್ಲಿ ಮಗಳು ಮಾತ್ರ ಹೇಗೆ ಸಾಯಲು ಸಾದ್ಯ ಗಂಡ ಮತ್ತು ಮಗುವಿಗೆ ಒಂದು ಗಾಯ ಕೂಡಾ ಆಗಿಲ್ಲ. ಹಿಂದೆ ಮಗಳಿಗೆ ಕಿರುಕುಳ ನೀಡುತ್ತಿದ್ದ ವಿಷಯವು ಮಗಳು ಪಾಲಕರಿಗೆ ತಿಳಿಸಿದ್ದಳು. ಅದೇ ವಿಷಯಕ್ಕೆ ಮನೆಯವರೆಲ್ಲ ಸೇರಿ ಹಣ ತರುವಂತೆ ಒತ್ತಾಯಿಸಿ ಆಕೆಯನ್ನು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರ.
ಈ ಸಂಧರ್ಭದಲ್ಲಿ ಆಕೆಯ ತಲೆಗ ಹೊಡೆದು ಗಂಭೀರವಾಗಿ ಗಾಯ ಮಾಡಿದ್ದಾರೆ ನಂತರ ಅಪಘಾತದ ನಾಟಕವಾಡಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಹಾಗಾಗಿ ಮಗಳ ಸಾವಿನಲ್ಲಿ ಸಂಶಯವಿದ್ದು ಪತಿ ನಾಗರಾಜು ಮತ್ತು ಅತ್ತೆ ಮಾವ ಸೇರಿ ಮಗಳನ್ನು ಕೊಂದಿದ್ದಾರೆ ಎಂದು ಆರೋಪಿಸಿ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಕೊಟ್ಟು ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ತಾಯಿ ಅಂಗಲಾಚಿದರು.
ಇನ್ನು ವಿಜಯಲಕ್ಷ್ಮಿ ಹಾಗೂ ನಾಗರಾಜು ಇಬ್ಬರಿಗೆ ಮದುವೆ ಆಗಿ ೬ ವರ್ಷ ಕಳೆದಿದ್ದರೂ ಗಂಡನ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರೂ ಅನೇಕ ಭಾರಿ ಸಂದಾನ ಕೂಡ ಮಾಡಲಾಗಿತ್ತು, ಆದರೆ ಕೆಲ ದಿನಗಳ ಹಿಂದೆ ಗಂಡನ ಮನೆಯವರೆಲ್ಲ ಸೇರಿ ದೈಹಿಕ ಹಲ್ಲೆ ಮಾಡಿ ಮೈಮೆಲಿದ್ದ ಒಡವೆಗಳನ್ನ ಕಿತ್ತು ಕಳುಹಿಸಿದ್ದರು ಎಂದು ಆರೋಪಿಸಲಾಗುತ್ತಿದೆ.
ಬಳ್ಳಾರಿ ವಿಮ್ಸ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಿ ಕಳುಹಿಸಿತ್ತಾದರೂ ಮೃತ ವಿಜಯಲಕ್ಷ್ಮಿ ಮನೆಯವರು ನಗರದ ವೆಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದರು. ಆದರೆ ಪೊಲೀಸರು ಶವ ಪರೀಕ್ಷೆಯ ವರದಿ ಬಂದ ನಂತರ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳಿದರು. ಆಕ್ರೊಷ ಗೊಂಡ ವಿಜಯಲಕ್ಷ್ಮಿ ಮನೆಯವರು ಠಾಣೆಯ ಮುಂದೆ ಶವ ಇಟ್ಟು ಪ್ರತಿಭಟನೆಗೆ ಮುಂದಾದಾಗ ಎಚ್ಚೆತ್ತ ಪೊಲೀಸರು ಮತ್ತೆ ಶವ ಪರೀಕ್ಷಗಾಗಿ ರಿಮ್ಸ ಆಸ್ಪತ್ರೆಗೆ ಕಳುಹಿಸಿ ಪ್ರಕರಣ ದಾಖಲಿಸಿಕೊಂಡರು.
ಒಟ್ಟಾರೆ ವರದಕ್ಷಿಣೆ ಕಿರುಕುಳಕ್ಕೆ ಮಗಳ ಜೀವ ಹಿಂಡಿದರು ಎಂಬ ಅರೋಪ ನಾಗರಾಜು ಮತ್ತೆ ಅವರ ಕುಟುಂಬದ ಮೇಲೆ ಆರೋಪಿಸಲಾಗಿದೆ. ಆರೊಪ ಏನೆ ಇರಲಿ ಮೃತ ವಿಜಯಲಕ್ಷ್ಮಿ ಸಾವಿಗೆ ನ್ಯಾಯ ದೊರಕಲಿ ಎಂಬುದು ನಮ್ಮ ಆಶಯ.
